ಬೆಂಗಳೂರು : ಭಾರತೀಯ ಸಮಾಜದಲ್ಲಿ ಗೂಬೆಯನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಗೂಬೆಯನ್ನು ಕಂಡರೆ ಶುಭ ಎಂದು ಹೇಳಲಾಗುತ್ತದೆ. *ಬೆಳಿಗ್ಗೆ ಪೂರ್ವದಲ್ಲಿ ಕುಳಿತಿರುವ ಗೂಬೆಯನ್ನು ನೋಡಿದ್ರೆ ಅಥವಾ ಧ್ವನಿ ಕೇಳಿದ್ರೆ ಹಣ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.*ರಾತ್ರಿ ವೇಳೆ ಹೊರಗೆ ಹಾಕಿರುವ ಮಂಚದ ಮೇಲೆ ಗೂಬೆ ಬಂದು ಕುಳಿತಲ್ಲಿ ಆ ಮನೆಯಲ್ಲಿ ಶೀಘ್ರವೇ ಮದುವೆ ನಡೆಯಲಿದೆ ಎಂದರ್ಥ.*ಗರ್ಭಿಣಿ ಹೆರಿಗೆಗೆ ಹೋಗುವ ವೇಳೆ ಗೂಬೆ ನೋಡಿದ್ರೆ ಆಕೆಗೆ ಅವಳಿ ಮಕ್ಕಳು ಜನಿಸುತ್ತವೆ ಎಂಬ ನಂಬಿಕೆ ಇದೆ.*ಗೂಬೆ ದೇಹ ರೋಗಿ ಮೈಗೆ ತಾಕಿದ್ರೆ ಆತ ಬೇಗ ಗುಣಮುಖನಾಗುತ್ತಾನೆಂದರ್ಥ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ