Select Your Language

Notifications

webdunia
webdunia
webdunia
webdunia

ರಿಷಭ್ ಶೆಟ್ಟಿ ಹಾಗೂ ನಟ ಡ್ಯಾನಿಷ್ ಸೇಠ್ ಮೇಲೆ ಶಿವಣ್ಣನ ಅಭಿಮಾನಿಗಳು ಕೋಪಗೊಂಡಿದ್ಯಾಕೆ?

ರಿಷಭ್ ಶೆಟ್ಟಿ ಹಾಗೂ  ನಟ ಡ್ಯಾನಿಷ್ ಸೇಠ್ ಮೇಲೆ ಶಿವಣ್ಣನ ಅಭಿಮಾನಿಗಳು ಕೋಪಗೊಂಡಿದ್ಯಾಕೆ?
ಬೆಂಗಳೂರು , ಶನಿವಾರ, 30 ಜೂನ್ 2018 (06:40 IST)
ಬೆಂಗಳೂರು : ಗುರುವಾರದಂದು ಬಹುನಿರೀಕ್ಷೆಯ ‘ದಿ ವಿಲನ್’ ಚಿತ್ರದ ಟೀಸರ್ ಗಳು ರಿಲೀಸ್ ಆಗಿದೆ. ಆದರೆ ಈ ಟೀಸರ್ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವುದರ ಮೂಲಕ ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ  ನಟ ಡ್ಯಾನಿಷ್ ಸೇಠ್ ಅವರು ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ದಿ ವಿಲನ್’ ಚಿತ್ರದ 2 ಟೀಸರ್ ಗಳು ಬಿಡುಗಡೆಯಾಗಿದ್ದು, ನಟರಾದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೆ ಕಿಚ್ಚ ಸುದೀಪ್ ಇಬ್ಬರದ್ದು ಟೀಸರ್ ಪ್ರತ್ಯೇಕವಾಗಿದೆ. ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ  ನಟ ಡ್ಯಾನಿಷ್ ಸೇಠ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಿಚ್ಚ ಸುದೀಪ್ ಅವರ ಟೀಸರ್ ನ ಬಗ್ಗೆ ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ. ಆದರೆ ಶಿವರಾಜ್ ಕುಮಾರ್ ಅವರ ಟೀಸರ್ ಬಗ್ಗೆ ಮಾತನಾಡಿಲ್ಲ. ಇದೇ ಈಗ ಶಿವರಾಜ್ ಕುಮಾರ್ ಅವರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದು, ನಿಮಗೆ ಶಿವಣ್ಣ ಯಾರು ಅಂತ ಗೊತ್ತಿಲ್ವ ಅಂತ ಪ್ರಶ್ನೆ ಮಾಡಿದ್ದಾರೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಲಯಾಳಂ ಫಿಲ್ಮ್​ ಚೇಂಬರ್ ​ಸದಸ್ಯತ್ವಕ್ಕೆ ನಾಲ್ವರು ನಟಿಯರು ರಾಜೀನಾಮೆ ನೀಡಲು ಕಾರಣವೇನು?