Select Your Language

Notifications

webdunia
webdunia
webdunia
webdunia

ರತ್ನಗಳನ್ನು ಧರಿಸುವಾಗ ಈ ನಿಯಮಗಳನ್ನು ಅನುಸರಿಸುವುದು ಅತ್ಯಗತ್ಯ

ರತ್ನಗಳನ್ನು ಧರಿಸುವಾಗ ಈ ನಿಯಮಗಳನ್ನು ಅನುಸರಿಸುವುದು ಅತ್ಯಗತ್ಯ
ಬೆಂಗಳೂರು , ಸೋಮವಾರ, 24 ಜೂನ್ 2019 (08:04 IST)
ಬೆಂಗಳೂರು : ಜೀವನದಲ್ಲಿ  ಉದ್ಯೋಗ, ವ್ಯಾಪಾರ, ವಿವಾಹ, ಸಂತಾನ ಹೀಗೆ ಅನೇಕ ಸಮಸ್ಯೆಯಿರುವವರು ಅವುಗಳು ಪರಿಹಾರವಾಗಿ ಒಳ್ಳೆಯದಾಗಲಿ ಎಂದು ರತ್ನಗಳನ್ನು ಧರಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರತ್ನಗಳನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು.



*ಯಾವುದೇ ರತ್ನ ಧರಿಸುವ ಮುನ್ನ ರತ್ನಶಾಸ್ತ್ರಜ್ಞರ ಸಲಹೆ ಇಲ್ಲದೆ ರತ್ನಧಾರಣೆಯನ್ನು ಮಾಡಬಾರದು.

 

*ಜಾತಕದಲ್ಲಿ ಯಾವ ದೆಶೆ ಯಾವ ಭುಕ್ತಿ ನಡೆಯುತ್ತಿದೆ ಎಂದು ತಿಳಿದ ನಂತರ ರತ್ನಗಳನ್ನು ಧರಿಸಬೇಕು.

 

*ಜಾತಕದಲ್ಲಿ ಕೆಟ್ಟಫಲಕೊಡುತಿರುಲ ಗ್ರಹದ ಸಂಬಂಧಪಟ್ಟ ರತ್ನವನ್ನು ಧರಿಸಿದರೆ ಉತ್ತಮ.

 

*ರತ್ನಗಳನ್ನು ಧರಿಸಲು ನಿಮ್ಮ ಜನ್ಮ ನಕ್ಷತ್ರ ಅಥವಾ ಹೆಸರಿಗೆ ತಾರಾಬಲವಿರುವ ದಿನವೇ ಧರಿಸಬೇಕು.

 

*ಯಾವುದೇ ತಿಂಗಳ ಕೃಷ್ಣಪಕ್ಷದಲ್ಲಿ ರತ್ನಧಾರಣೆ ಮಾಡಬಾರದು.

 

*ಯಾವ ಗ್ರಹದ ರತ್ನ ಧರಿಸಬೇಕೋ ಆ ಗ್ರಹದ ವಾರ ದಿನವನ್ನೆ ಗೊತ್ತುಪಡಿಸಿ ಧರಿಸಬೇಕು

 

ಮೊದಲು ಧರಿಸುವಾಗ ರಾಹುಕಾಲ, ಯಮಗಂಡಕಾಲಗಳಲ್ಲಿ ರತ್ನಧಾರಣೆ ಮಾಡಬಾರದು

 

*ಮುತ್ತುಗಳಿಗೆ ಹಾಗೂ ಯಾವುದೇ ರತ್ನಗಳಿಗೆ ರಂಧ್ರ ಮಾಡಿಸಿ ಉಪಯೋಗಿಸಬಾರದು.

 

*ಸಾಮಾನ್ಯವಾಗಿ ರತ್ನಧಾರಣೆಯೆಂದು ಬ್ರಾಹ್ಮಿ ಮುಹೂರ್ತವೇ ಉತ್ತಮ ಫಲ ಸಿಗುತ್ತದೆ.

 

*ಯಾವುದೇ ರತ್ನವನ್ನು ಧರಿಸುವ ಸಮಯದಲ್ಲಿ ಹೆಚ್ಚು ಫಲಕಾರಿಯಾಗಲು ಕ್ಷೀರದಿಂದ ತೊಳೆದು ನಿಮ್ಮ ಮನೆಯ ದೇವರ ಮುಂದೆ ಪೂಜಿಸಿ ಧರಿಸಿದರೆ ಉತ್ತಮ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಮೂರು ರಾಶಿಯವರು ಕೆಂಪುದಾರವನ್ನು ಕೈಗೆ ಕಟ್ಟಿಕೊಂಡರೆ ಏನಾಗುತ್ತದೆ ಗೊತ್ತಾ?