Publish Date: Fri, 14 Dec 2018 (07:12 IST)
Updated Date: Fri, 14 Dec 2018 (07:14 IST)
ಬೆಂಗಳೂರು : ಜಾತಕ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಮನೆಯ ಯಜಮಾನನ ಜಾತಕದಲ್ಲಿ ಗ್ರಹ ಸ್ಥಿತಿಗಳು ಸರಿಯಾಗಿರದಿದ್ದರೆ ಇನ್ನು ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ದೋಷಗಳು ದೂರವಾಗಬೇಕೆಂದರೆ ಈ ರೀತಿ ಮಾಡಿ.
ಒಂದು ಒಳ್ಳೆಯ ದಿನ ನೋಡಿಕೊಂಡು ಬೆಳಗ್ಗಿನ ಜಾವ ಬೇಗ ಎದ್ದು, ತಲೆಸ್ನಾನ ಮಾಡಿ ಒಂದು ಲೋಟದಲ್ಲಿ ಗೋಮೂತ್ರವನ್ನು ತೆಗೆದುಕೊಳ್ಳಬೇಕು. ಸ್ವಲ್ಪ ಗೋಮೂತ್ರವನ್ನು ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಅದನ್ನು ಮನೆಯ ಎಲ್ಲಾ ಮೂಲೆಗಳಿಗೂ ಪ್ರೋಕ್ಷಣೆ ಮಾಡಬೇಕು. ಹೀಗೆ ಮಾಡಿದರೆ ನಿಮಗಿರುವ ಎಲ್ಲಾ ದೋಷಗಳು ದೂರವಾಗಿ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.
ಹಾಗೇ ಗೋಮೂತ್ರಕ್ಕೆ ಸ್ವಲ್ಪ ಅರಶಿನ ಮಿಶ್ರಣ ಮಾಡಿಕೊಂಡು ಮಂಗಳವಾರ, ಶುಕ್ರವಾರ, ಏಕಾದಶಿ ದಿನಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.