ಬೆಂಗಳೂರು : ಪ್ರತಿದಿನ ಪ್ರತಿಯೊಬ್ಬರ ಮನೆಯಲ್ಲೂ ದೇವರಿಗೆ ದೀಪ ಬೆಳಗುತ್ತಾರೆ. ಆದರೆ ಸಂಜೆಯ ವೇಳೆ ಗೋಧೂಳಿ ಸಮಯದಲ್ಲಿ ದೇವರಿಗೆ ಈ ದೀಪವನ್ನು ಬೆಳಗಿದರೆ ಎಲ್ಲವೂ ಶುಭವಾಗುವುದು.
ಶ್ರೀ ಜೇಷ್ಠ ದೇವಿ ಮನೆಯ ಹಿಂದಿನ ಬಾಗಿಲಿನಿಂದ ಮತ್ತು ಶ್ರೀ ಮಹಾಲಕ್ಷ್ಮಿ ದೇವಿ ಮನೆಯ ಮುಂಬಾಗಿಲಿನ ಭಾಗಿಲಿನಿoದ ಮನೆಯೊಳಗೆ ಪ್ರವೇಶ ಮಾಡುತ್ತಾರೆ.ಅದಕ್ಕೆ ಹಿಂದಿನ ಬಾಗಿಲನ್ನು ಗೋಧೋಳಿ ಸಮಯದಲ್ಲಿ ಮುಚ್ಚಬೇಕು ಮತ್ತು ಮುಂಬಾಗಿಲಿನ ಮನೆಯ ಮುಂದಿನ ಬಾಗಿಲನ್ನು ತೆರೆಯಬೇಕು.
ಈ ಗೋಧೂಳಿಯ ಸಮಯದಲ್ಲಿ ಎಳ್ಳಿನ ಎಣ್ಣೆಯಿಂದ ದೀಪಾರಾಧನೆ ಮಾಡಿ. ಈ ಕೆಳಗಿನ ಮಂತ್ರವನ್ನು ಪಠಿಸಿದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.
ದೀಪಂ ಜ್ಯೋತಿ ಪರಬ್ರಹ್ಮ ,
ದೀಪಂ ಸರ್ವತೋಪಹಮ,
ದೀಪೇನ ಸಾಧ್ಯತೇ ಸರ್ವಂ ,
ಸಂಧ್ಯಾ ದೀಪಂ ನಮೋಸ್ತುತೇ