ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

Krishnaveni K
ಶುಕ್ರವಾರ, 15 ನವೆಂಬರ್ 2024 (08:45 IST)
ಬೆಂಗಳೂರು: ಹಿಂದೂ ಪುರಾಣದ ಪ್ರಕಾರ ಕಾರ್ತಿಕ ಮಾಸ ಎಂದರೆ ಅತ್ಯಂತ ಶ್ರೇಷ್ಠ ಮಾಸವಾಗಿದೆ. ಈ ಮಾಸದಲ್ಲಿ ಕೆಲವೊಂದು ಕೆಲಸ ಮಾಡುವುದರಿಂದ ನಮಗೆ ಮೋಕ್ಷ ಸಿಗುವುದು ಎಂಬ ನಂಬಿಕೆಯಿದೆ.

ಕಾರ್ತಿಕ ಮಾಸ ಎಂಬುದು ಮಹಾವಿಷ್ಣುವಿಗೆ ಸಮರ್ಪಿತವಾದ ಮಾಸವಾಗಿದೆ. ಈ ಮಾಸದಲ್ಲಿ ಮಹಾವಿಷ್ಣುವಿನ ಜೊತೆಗೆ ಶಿವ, ತುಳಸಿಯನ್ನು ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಕಾರ್ತಿಕ ಮಾಸದ್ಲಿ ಪುಣ್ಯ ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಪವಿತ್ರ ಕೆಲಸವಾಗಿದೆ.

ಕಾರ್ತಿಕ ಮಾಸದಲ್ಲಿ ಅಗತ್ಯವಿರುವವರಿಗೆ ಬಟ್ಟೆ ದಾನ ಮಾಡುವುದು, ಬಡವರಿಗೆ ಹಣ್ಣು, ಹಂಪಲುಗಳನ್ನು ನೀಡುವುದು, ಗೋ ಶಾಲೆಗಳಲ್ಲಿ ಹಸುವಿನ ಸೇವೆ ಮಾಡುವುದು ಅಥವಾ ಗೋ ಗ್ರಾಸ ನೀಡುವುದು, ತುಳಸಿ, ನೆಲ್ಲಿಕಾಯಿ, ಧಾನ್ಯಗಳನ್ನು ದಾನ ಮಾಡುವುದು, ದೇವಾಲಯದಲ್ಲಿ ದೀಪ ಹಚ್ಚುವುದು, ಮಹಾವಿಷ್ಣುವನ್ನು ಮುಂಜಾನೆ ಮತ್ತು ಸಂಜೆ ಪೂಜೆ ಮಾಡುವುದರಿಂದ ಮೋಕ್ಷ ಪಡೆದುಕೊಳ್ಳಬಹುದು ಎಂಬ ನಂಬಿಕೆಯಿದೆ.

ಕಾರ್ತಿಕ ಮಾಸವನ್ನು ದೇವರ ಮಾಸ ಎಂದೇ ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಬಡವ-ಬಲ್ಲಿದರ ಸೇವೆ ಮಾಡುವುದರಿಂದ ದೇವರಿಗೆ ಅತ್ಯಂತ ಪ್ರಿಯರಾಗುತ್ತೀರಿ. ಸೂರ್ಯೋದಯಕ್ಕೆ ಮುನ್ನ ನದಿ ಸ್ನಾನ ಮಾಡಿ ದೇವರ ಪ್ರಾರ್ಥನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಮುಂದಿನ ಸುದ್ದಿ
Show comments