Webdunia - Bharat's app for daily news and videos

Install App

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ಬಗ್ಗೆ ಚಿಂತೆ ಬೇಡ

Krishnaveni K
ಶುಕ್ರವಾರ, 22 ನವೆಂಬರ್ 2024 (09:09 IST)
ಬೆಂಗಳೂರು: ಮಕರ ರಾಶಿಯವರಿಗೆ 2025 ಶುಭದಾಯಕವಾಗಿದ್ದು ಆರೋಗ್ಯದ ವಿಚಾರದಲ್ಲಿ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. 2025 ರ ಆರೋಗ್ಯ ಫಲ ಇಲ್ಲಿದೆ ನೋಡಿ.

ಮಕರ ರಾಶಿಯವರು ಸಾಮಾನ್ಯವಾಗಿ ಸಂಧು ವಾತ, ಕೈ ಕಾಲುಗಳಲ್ಲಿ ನೋವು, ಉಸಿರಾಟದ ಸಮಸ್ಯೆ, ಹೃದಯ ಸಂಬಂಧೀ ಆರೋಗ್ಯ ಸಮಸ್ಯೆಗೊಳಗಾಗುತ್ತಾರೆ. ಆದರೆ ಈ ವರ್ಷದ ಆರಂಭದಲ್ಲೇ ಮಕರ ರಾಶಿಯವರಿಗೆ ಆರೋಗ್ಯದ ವಿಚಾರದಲ್ಲಿ ಶುಭದಾಯಕವಾಗಿರುತ್ತದೆ.

ಗುರು ಮತ್ತು ಶನಿಯ ಅನುಗ್ರಹದಿಂದ ಏಪ್ರಿಲ್ 2025 ರವರೆಗೆ ಆರೋಗ್ಯದಲ್ಲಿ ಸುಧಾರಣೆಯಿರಲಿದೆ. ಆದರೆ ಬಳಿಕ ಕೊಂಚ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಹಾಗಿದ್ದರೂ ಗಂಭೀರ ಅಪಾಯಗಳೇನೂ ಇರುವುದಿಲ್ಲ. ಉತ್ತಮ ಜೀವನ ಶೈಲಿ ಅಳವಡಿಸುವುದು ಮುಖ್ಯ.

ಧೂಮಪಾನ, ಮದ್ಯಪಾನ ಮಾಡುತ್ತಿದ್ದರೆ ಆದಷ್ಟು ದೂರವಿರುವುದನ್ನು ಅಭ್ಯಾಸ ಮಾಡಿ. ವರ್ಷದ ಮಧ್ಯಾವಧಿಯಲ್ಲಿ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡುಬಂದೀತು. ಆದರೆ ಗಾಬರಿಪಡಬೇಕಾಗಿರುವುದು ಏನೂ ಇರುವುದಿಲ್ಲ. ಮಹಿಳೆಯರಿಗೆ ಸಂಧು ವಾತದಂತಹ ಸಮಸ್ಯೆಗಳು ಕಂಡುಬಂದೀತು. ಇದರಿಂದ ದೈನಂದಿನ ಕೆಲಸಗಳಿಗೆ ಕೊಂಚ ತೊಂದರೆಗಳು ಬಂದೀತು. ಆದರೂ ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗದು. ಉತ್ತಮ ಆರೋಗ್ಯಕ್ಕಾಗಿ ದೇವತಾ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments