Select Your Language

Notifications

webdunia
webdunia
webdunia
webdunia

ವಾಹನಗಳಿಗೆ ತಗಲಿದ ದೃಷ್ಟಿಯನ್ನು ಈ ರೀತಿ ನಿವಾರಿಸಿಕೊಂಡು ಅಪಾಯದಿಂದ ಪಾರಾಗಿ

ವಾಹನಗಳಿಗೆ ತಗಲಿದ ದೃಷ್ಟಿಯನ್ನು ಈ ರೀತಿ ನಿವಾರಿಸಿಕೊಂಡು ಅಪಾಯದಿಂದ ಪಾರಾಗಿ
ಬೆಂಗಳೂರು , ಬುಧವಾರ, 13 ಫೆಬ್ರವರಿ 2019 (08:05 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ವಾಹನಗಳಿಗೆ ದೃಷ್ಟಿ ತಗಲಿದರೆ ಅದರಲ್ಲಿ ಪ್ರಯಾಣ ಮಾಡುವವರಿಗೆ ಈ ರೀತಿ ಒಂದಲ್ಲಾ ಒಂದು ತೊಂದರೆಗಳು ನಿರ್ಮಾಣವಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.  ಆದ್ದರಿಂದ ಅಂತಹ ವಾಹನಗಳಿಗೆ ಈ ರೀತಿಯಾಗಿ ದೃಷ್ಟಿ ತೆಗೆದರೆ ಮುಂಬರುವ ಅಪಾಯವನ್ನು ತಡೆಯಬಹುದುಂತೆ .


ವಾಹನಗಳ ದೃಷ್ಟಿಯನ್ನು ತೆಗೆಯಲು ಆಂಜನೇಯ ಸ್ವಾಮಿ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿ ಮೊದಲು ವಾಹನದ ಬಾಗಿಲುಗಳನ್ನು ತೆರೆದು ಇಡಬೇಕು, ನಂತರ ವಾಹನದ ಮುಂದೆ ನಿಂತು ಒಂದು ತೆಂಗಿನಕಾಯಿಯಿಂದ ಬಲ ಭಾಗಕ್ಕೆ ವರ್ತುಲ ಕೃತಿಯಲ್ಲಿ ಮೂರು ಬಾರಿ ತೆಂಗಿನಕಾಯಿಯನ್ನು ನಿವಾಳಿಸಬೇಕು ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ದೇವಸ್ಥಾನದ ಮೆಟ್ಟಿಲ ಮೇಲೆ ಒಡೆಯಬೇಕು.


ನಂತರ ಒಡೆದ ತೆಂಗಿನಕಾಯಿಯ ತುಂಡುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಗಾಡಿಯ ಮೇಲಿಂದ ನಾಲ್ಕು ದಿಕ್ಕುಗಳಿಗೆ ಎಸೆಯಬೇಕು, ಹೀಗೆ ದೃಷ್ಟಿ ತೆಗೆದ ನಂತರ ನಿಮ್ಮ ವಾಹನವನ್ನು ಊದುಬತ್ತಿ ಗಳಿಂದ ಬೆಳಗಿಸಿ ಮತ್ತು ದೇವತೆಯ ಜಯಘೋಷ ಮಾಡಿ ಹೊರಡಿ. ಹೀಗೆ ಮಾಡಿದರೆ ಯಾವುದೇ ಅಪಾಯ, ಅವಗಡ ಗಳಿಲ್ಲದೆ ನಿಮ್ಮ ಪ್ರಯಾಣ ಸಂಪೂರ್ಣವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿರುವ ಈ ವಸ್ತುವಿನಿಂದ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ಖಂಡಿತ