Webdunia - Bharat's app for daily news and videos

Install App

ನಿಮ್ಮ ಜಾತಕದಲ್ಲಿ ಶುಕ್ರಗ್ರಹದ ಪ್ರಭಾವ ಹೆಚ್ಚಾಗಬೇಕಾ? ಹಾಗಾದ್ರೆ ಶ್ರದ್ಧೆ- ಭಕ್ತಿಯಿಂದ ಹೀಗೆ ಮಾಡಿ

Webdunia
ಬುಧವಾರ, 25 ಜುಲೈ 2018 (06:44 IST)
ಬೆಂಗಳೂರು : ಕೆಲವರಿಗೆ ವ್ಯಕ್ತಿತ್ವದಲ್ಲಿ ಆಕರ್ಷಣೆ  ಕಾಯ್ದುಕೊಳ್ಳುವ ಉದ್ದೇಶ ಇರುತ್ತದೆ. ಅಂದರೆ ಎಲ್ಲದರಲ್ಲೂ ಯಶಸ್ಸು ಕಾಣಬೇಕು ಎಂಬ ಹಂಬಲವಿರುತ್ತದೆ. ಇಂತಹ ಆಕರ್ಷಕ ವ್ಯಕ್ತಿತ್ವ ಹೊಂದಲು ಶುಕ್ರನ ಅನುಗ್ರಹ ಬಹಳ ಮುಖ್ಯ. ಜ್ಯೋತಿಷ್ಯದ ಪ್ರಕಾರ ಸೌಂದರ್ಯ, ಚರಿಷ್ಮಾ, ಆಕರ್ಷಣೆ, ವಿಲಾಸಿ ಜೀವನ ಇವೆಲ್ಲವನ್ನೂ ಸೂಚಿಸುವ ಗ್ರಹ ಶುಕ್ರ. ಅದಕ್ಕೆ ಈ  ಸಲಹೆಗಳನ್ನು ಶ್ರದ್ಧಾ- ಭಕ್ತಿಯಿಂದ ಅನಿಸರಿಸಿದರೆ ಶುಕ್ರನ ಅನುಗ್ರಹ ಪಡೆಯಬಹುದೆಂದು ಜ್ಯೋತಿಷ್ಯರು ಹೇಳುತ್ತಾರೆ.


*ಮೊದಲನೆಯದಾಗಿ ಲಕ್ಷ್ಮಿದೇವಿಯು ಶುಕ್ರ ಗ್ರಹದ ಅಧಿದೇವತೆ. ಲಕ್ಷ್ಮಿ ದೇವಿಯ ಆರಾಧನೆ ಮಾಡುವುದರಿಂದ ಶುಕ್ರ ಗ್ರಹದ ಅನುಗ್ರಹ ಪಡೆಯಬಹುದಂತೆ.


* ಶುಕ್ರ ಗ್ರಹದ ಬೀಜ ಮಂತ್ರ ("ಓಂ ದ್ರಂ ದ್ರೀಂ ದ್ರೌಂ ಸಹ್ ಶುಕ್ರಾಯ ನಮಃ") ಪಠಣ ಮಾಡಿದರೆ ನಿಮ್ಮ ಮೇಲೆ  ಶುಕ್ರನ ಸಕಾರಾತ್ಮಕ ಗುಣಗಳು ಹೆಚ್ಚಾಗುತ್ತದೆಯಂತೆ

* ಬಟ್ಟೆ ಮತ್ತು ಮೊಸರು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತವೆ. ಇವೆರಡನ್ನೂ ದಾನ ಮಾಡುವುದರಿಂದ ಶುಕ್ರ ಗ್ರಹದ ನಕಾರಾತ್ಮಕ ಪರಿಣಾಮಗಳು ದೂರವಾಗುತ್ತವೆ. ಸೌಂದರ್ಯ ಹಾಗೂ ಆಕರ್ಷಣೆ ವೃದ್ಧಿಯಾಗುತ್ತವೆ

* ಯಾರ ಜಾತಕದಲ್ಲಿ ಶುಕ್ರ ಗ್ರಹ ನೀಚವಾಗಿರುತ್ತದೋ ಅಥವಾ ದುರ್ಬಲ ಆಗಿರುತ್ತದೋ ಅಂಥವರು ಆರು ಮುಖಿ ರುದ್ರಾಕ್ಷಿ ಧರಿಸುವುದರಿಂದ ಗ್ರಹಕ್ಕೆ ಶಕ್ತಿ ದೊರೆಯುತ್ತದೆ. ಹಾಗೂ ಶುಕ್ರ ಗ್ರಹ ದುರ್ಬಲ ಆಗಿರುವುದರಿಂದ ಬೀರುವ ನಕಾರಾತ್ಮಕ ದೋಷಗಳ ನಿವಾರಣೆಯೂ ಆಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಈ ಎರಡು ಗಣೇಶ ಮಂತ್ರ ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೇವಿ ಕ್ಷಮಾಪಣಾ ಸ್ತೋತ್ರ ಇಲ್ಲಿದೆ: ಇದನ್ನು ತಪ್ಪಿಲ್ಲದೇ ಓದಿದರೆ ಏನು ಫಲ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ತಪ್ಪು ಮಾಡಿದಾಗ ಶಿವ ಅಪರಾಧ ಕ್ಷಮಾಪಣಾ ಸ್ತೋತ್ರ ಓದಿ ಪರಿಹಾರ ಸಿಗುತ್ತದೆ: ಇಲ್ಲಿದೆ ಸ್ತೋತ್ರ

ಮುಂದಿನ ಸುದ್ದಿ
Show comments