Publish Date: Thu, 28 Nov 2019 (05:58 IST)
Updated Date: Thu, 28 Nov 2019 (06:01 IST)
ಬೆಂಗಳೂರು : ಒಂದೋಂದು ರಾಶಿಯಲ್ಲಿ ಹುಟ್ಟಿದವರ ಸ್ವಭಾವ ಒಂದೋಂದು ರೀತಿಯಲ್ಲಿ ಇರುತ್ತದೆ. ಅದೇರೀತಿ ಮಕರ ರಾಶಿಯಲ್ಲಿ ಹುಟ್ಟಿದವರ ಗುಣಸ್ವಭಾವ ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಮಕರ ರಾಶಿಯವರ ಅಧಿಪತಿ ಶನಿಗ್ರಹವಾಗಿದೆ. ಈ ರಾಶಿಯಲ್ಲಿ ಹುಟ್ಟಿದವರು ತುಂಬಾ ವಿಷಯವನ್ನು ಗುಟ್ಟಾಗಿ ಇಡುತ್ತಾರೆ. ಇವರು ಬೇರೆಯವರ ಮೇಲೆ ಬೇಗ ಪ್ರಭಾವ ಬೀರುತ್ತಾರೆ. ದೇವರ ಬಗ್ಗೆ ತುಂಬಾ ಆಸಕ್ತಿ ಹೊಂದಿರುತ್ತಾರೆ. ಇವರಿಗೆ ಸ್ವಲ್ಪ ಅಹಂಕಾರ ಹೆಚ್ಚಾಗಿರುತ್ತದೆ. ಮತ್ತು ಮಾತಿನ ಮೇಲೆ ನಿಯಂತ್ರಣವಿರಲ್ಲ. ಇವರು ಯಾವುದೇ ಕೆಲಸವನ್ನು ಸಂಜೆ, ರಾತ್ರಿಯ ವೇಳೆ ಕೊಟ್ಟರೆ ತುಂಬಾ ಚೆನ್ನಾಗಿ ಮಾಡುತ್ತಾರೆ.
ಇವರು ಚಂಚಲ ಮನಸ್ಸಿನವರು. ಇವರು ತುಂಬಾ ಭಾವನಾತ್ಮಕ ವ್ಯಕ್ತಿಯಾಗಿರುತ್ತಾರೆ. ಬೇರೆಯವರನ್ನು ಬೇಗ ನಂಬುತ್ತಾರೆ. ಇವರು ತಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ ಹೇರುತ್ತಾರೆ. ಇವರು ಮಾಡಬಹುದಾದ ಕೆಲಸಗಳೆಂದರೆ ಸೈನಿಕ ವೃತ್ತಿ, ಪೊಲೀಸ್, ಇಂಜಿನಿಯರ್, ಕ್ರೀಡೆ, ಲಾಯರ್.