Select Your Language

Notifications

webdunia
webdunia
webdunia
webdunia

ದೃಷ್ಟಿ ದೋಷದ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಾ?

ದೃಷ್ಟಿ ದೋಷದ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಾ?
ಬೆಂಗಳೂರು , ಬುಧವಾರ, 6 ಡಿಸೆಂಬರ್ 2017 (06:43 IST)
ಬೆಂಗಳೂರು: ಎಲ್ಲಾ ದೋಷಗಳಿಗಿಂತ ಅತಿ ಹೆಚ್ಚಿನ ಪರಿಣಾಮಕಾರಿಯಾದ ದೋಷವೆಂದರೆ ದೃಷ್ಟಿದೋಷ. ಒಬ್ಬ ವ್ಯಕ್ತಿಯ ಮೇಲೆ ಬೇರೆಯವರ ಕಣ್ಣಿನ ದೃಷ್ಟಿ ತಗಲಿದರೆ ಆತನ ಅಭಿವೃದ್ಧಿ ಕುಂಠಿತವಾಗುತ್ತದೆ. ಹಾಗೆ ಒಂದು ಕುಟುಂಬದ ಮೇಲೆ ಬಿದ್ದರೂ ಕೂಡ ಕುಟುಂಬದವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಣ್ಣಿನ ದೃಷ್ಟಿ ಒಂದು ನಕರಾತ್ಮಕ ಶಕ್ತಿ ಎಂದು ಪಂಡಿತರು ಹೇಳುತ್ತಾರೆ.


 ಈ ಕಣ್ಣಿನ ದೃಷ್ಟಿ ತಗಲದಂತೆ ಮಾಡಬೇಕಾದರೆ ಹಣೆಯ ಮೇಲೆ ಕುಂಕುಮವನ್ನು ಧರಿಸಬೇಕು. ಹಾಗೆ ಗಂಡಸರು ಕೆಂಪುಬಣ್ಣದ, ಚಿಕ್ಕ ಮಕ್ಕಳಿಗೆ ಕಪ್ಪುಬಣ್ಣದ ದಾರವನ್ನು ಕಟ್ಟಬೇಕು. ಮನೆಯ ಮುಂದಿರುವ ತುಳಸಿಗಿಡ ಒಣಗದಂತೆ ನೋಡಿಕೊಳ್ಳಬೇಕು. ಆಗ ಕುಟುಂಬದವರ ಮೇಲೆ  ಕೆಟ್ಟ ದೃಷ್ಟಿ ಬೀಳುವುದಿಲ್ಲ.


 ನರಸಿಂಹ ಸ್ವಾಮಿಯನ್ನು ಆರಾಧಿಸುವ ಭಕ್ತರಿಗೆ ಕೆಟ್ಟದೃಷ್ಟಿ ಖಂಡಿತವಾಗಿ ಇರುವುದಿಲ್ಲ. ನರಸಿಂಹ ಸ್ವಾಮಿಗೆ ಪ್ರತಿದಿನ ದೀಪಾರಾಧನೆ ಮಾಡುವುದರಿಂದ ನರದೃಷ್ಟಿ ದೋಷವನ್ನು ಪರಿಹರಿಸಿಕೊಳ್ಳಬಹುದು. ಹಾಗೆ ನರಸಿಂಹ ಸ್ವಾಮಿಯ ಪ್ರತಿಮೆ ಇರುವ ಉಂಗುರವನ್ನು ಹೆಬ್ಬೆರಳಿನಲ್ಲಿ ಧರಿಸಿದರೆ ನರದೃಷ್ಟಿ ಪರಿಣಾಮ ಬೀರುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳಸೂತ್ರಕ್ಕೂ ಇದೆಯಂತೆ ದೋಷ