Select Your Language

Notifications

webdunia
webdunia
webdunia
webdunia

ಶಿಕ್ಷಕನಿಂದ ಹಲ್ಲೆ: ಕಣ್ಣು ಕಳೆದುಕೊಂಡ ವಿದ್ಯಾರ್ಥಿ

Meerut
ಉತ್ತರ ಪ್ರದೇಶ , ಭಾನುವಾರ, 8 ಅಕ್ಟೋಬರ್ 2017 (13:57 IST)
ಉತ್ತರ ಪ್ರದೇಶ: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ ಕಪಾಳ ಮೋಕ್ಷ ಮಾಡಿದ್ದು, 5ನೇ ತರಗತಿ ವಿದ್ಯಾರ್ಥಿ ತನ್ನ ಕಣ್ಣು ಕಳೆದುಕೊಂಡಿರುವ ಘಟನೆ ನಡೆದಿದೆ.

ಮೀರತ್ ರಸ್ತೆಯಲ್ಲಿರುವ ಶಾರದನ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕಣ್ಣು ಕಳೆದುಕೊಂಡ ವಿದ್ಯಾರ್ಥಿ ಸಹಪಾಠಿ ಬಳಿ ತನ್ನ ನೋಟ್ ಬುಕ್ ಕೇಳಿದ್ದಾನೆ. ಆಗ ಹಿಂದಿನಿಂದ ನೋಡಿದ ಟೀಚರ್, ವಿದ್ಯಾರ್ಥಿಯ ಕಪಾಳಕ್ಕೆ ಹೊಡೆದಿದ್ದಾರೆ. ಹೊಡೆತ ಕಣ್ಣಿನ ಮೆಂಬ್ರೇನ್ ಭಾಗಕ್ಕೆ ತಗುಲಿದ್ದು, ನಿಧಾನವಾಗಿ ಆತ ತನ್ನ ದೃಷ್ಟಿ ಕಳೆದುಕೊಂಡಿದ್ದಾನೆ.

ಘಟನೆ ಬಳಿಕ ವಿದ್ಯಾರ್ಥಿ ಮನೆಗೆ ತೆರಳುತ್ತಿದ್ದಂತೆ ಪೋಷಕರು ಗಮನಿಸಿದ್ದು, ಘಟನೆ ಬಗ್ಗೆ ಮಗು ಪೋಷಕರಲ್ಲಿ ಹೇಳಿಕೊಂಡಿದ್ದಾನೆ. ಕೂಡಲೇ ಶಾಲೆಯ ಆಡಳಿತ ಮಂಡಳಿಯನ್ನು ಭೇಟಿ ಮಾಡಿದ ಪೋಷಕರು ವಿವರಣೆ ಕೇಳಿದ್ದಾರೆ. ಆದರೆ ಘಟನೆಯನ್ನು ನಿರ್ಲಕ್ಷಿಸಿರುವ ಶಾಲೆಯ ಆಡಳಿತ ಮಂಡಳಿ, ಪೋಷಕರನ್ನು ನಿಂದಿಸಿದ್ದಾರೆ.

ಈ ಸಂಬಂಧ ಪೋಷಕರು ಎಸ್ಪಿಗೆ ದೂರು ನೀಡಿದ್ದು, ಎಸ್ಪಿ ವಿದ್ಯಾರ್ಥಿಗೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಮಹಿಳೆಯರು ಹೇರ್ ಕಟ್, ಐಬ್ರೋ ಶೇಪ್ ಮಾಡಿಸುವುದು ನಿಷೇಧ