Select Your Language

Notifications

webdunia
webdunia
webdunia
Saturday, 12 April 2025
webdunia

ಆರೋಗ್ಯ, ನೆಮ್ಮದಿ, ಶಾಂತಿ ದೊರಕಲು ಶಮಿ ಪತ್ರೆಯಿಂದ ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು , ಸೋಮವಾರ, 3 ಜೂನ್ 2019 (06:54 IST)
ಬೆಂಗಳೂರು : ಪಂಚಮ ಶನಿಕಾಟ, ಅಷ್ಟಮ ಶನಿಕಾಟ ಹಾಗೂ ಏಳೂವರೆ ವರ್ಷ ಶನಿ ಕಾಟ ಇರುವವರು ಶನೇಶ್ವರನಿಗೆ ಶನಿವಾರದಂದು ಈ ಪತ್ರೆಯಿಂದ ಪೂಜೆ ಮಾಡಿದರೆ ತೊಂದರೆ ಕಷ್ಟಗಳು ನಿವಾರಣೆಯಾಗುತ್ತದೆ.




ಶಮಿ ಪತ್ರೆ ಎಂದರೆ ಬನ್ನಿ ಮರದ ಪತ್ರೆ. ಸಾಮಾನ್ಯವಾಗಿ ಶಮಿ ಪತ್ರೆ ಶನೇಶ್ವರನಿಗೆ ಪ್ರಿಯವಾದದ್ದು. ಕೆಲವರಿಗೆ ಬಹಳ ಕಾಲದಿಂದ ಆರೋಗ್ಯದಲ್ಲಿ ತೊಂದರೆ ಇದ್ದು ನರಳಾಟ, ನೋವು ಸಂಕಟವಿದ್ದಾಗ ಈಶ್ವರನಿಗೆ ಪ್ರತಿ ಸೋಮವಾರ ಈ ಪತ್ರೆಯಿಂದ ಪೂಜೆ ಮಾಡಿದರೆ ಆರೋಗ್ಯ ಲಭಿಸುತ್ತದೆ.


ಮನೆಯಲ್ಲಿ ಅಶಾಂತಿ ಕುಟುಂಬದಲ್ಲಿ ಕಲಹದಂತಹ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಶಮೀಪತ್ರೆಯಿಂದ ಪೂಜೆ ಮಾಡಿದರೆ ಶುಭ, ನೆಮ್ಮದಿ, ಶಾಂತಿ ದೊರಕುತ್ತದೆ. ಜನ್ಮಾಂತರದ ಪಾಪ ಕರ್ಮಗಳು ಮನೆಯಲ್ಲಿ ಶುಭಕಾರ್ಯಗಳಿಗೆ ತೊಂದರೆ ಮಕ್ಕಳ ಆರೋಗ್ಯ ವಿಧ್ಯಾಭ್ಯಾಸ ವಿವಾಹ ಮುಂತಾದವುಗಳಲ್ಲಿ ತೊಂದರೆ ಇದ್ದಾಗ ಶ್ರೀಚಕ್ರ ಸಮೇತ ಯಾವುದೇ ದೇವಿ ದೇವಸ್ಥಾನಕ್ಕೆ ಹೋಗಿ ಶಮೀಪತ್ರೆಯಿಂದ ಪೂಜೆ ಮಾಡಿದರೆ ಒಳ್ಳೇದಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?