ಬೆಂಗಳೂರು: ದೇವಿ ಚಂದ್ರಘಂಟಾ ಎಂದರೆ ಪಾರ್ವತಿ ದೇವಿಯ ಅವತಾರವಾಗಿದ್ದು, ಚಂದ್ರಘಂಟಾ ಮಂತ್ರ ಓದುವುದರಿಂದ ನಿಮಗೆ ಯಾವ ಲಾಭಗಳು ಸಿಗಲಿವೆ ಎಂದು ಇಲ್ಲಿದೆ ವಿವರ.
ಚಂದ್ರಘಂಟಾ ದೇವಿ ಎಂದರೆ ಪಾರ್ವತಿ ಅಥವಾ ದುರ್ಗಾ ಮಾತೆಯ ರೂಪವಾಗಿದೆ. ನವರಾತ್ರಿ ಸಂದರ್ಭಗಳಲ್ಲಿ ಚಂದ್ರಘಂಟಾ ದೇವಿಯ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರನ್ನುಂಟು ಮಾಡುತ್ತದೆ. ಪಾರ್ವತಿ ದೇವಿಯನ್ನು ಚಂದ್ರಘಂಟಾ ರೂಪದಲ್ಲಿ ಪೂಜಿಸುವುದರಿಂದ ಜೀವನದಲ್ಲಿ ಸಮೃದ್ಧಿ, ಯಶಸ್ಸು ನಿಮ್ಮದಾಗುತ್ತದೆ.
ಚಂದ್ರಘಂಟಾ ಮಂತ್ರ ಹೀಗಿದೆ:
ಓಂ ದೇವಿ ಚಂದ್ರಘಂಟಾಯೈ ನಮಃ
ಓಂ ದೇವಿ ಚಂದ್ರಘಂಟಾಯೈ ನಮಃ
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿಯಲ್ಲಿ ದುರ್ಗೆಯ ವಿಗ್ರಹದ ಮುಂದೆ ಕುಳಿತು ಈ ಮಂತ್ರವನ್ನು ಹೇಳುತ್ತಾ ದೇವಿಯ ಪೂಜೆ ಮಾಡಿದರೆ ಜೀವನದಲ್ಲಿ ಶತ್ರು ನಾಶವಾಗಿ ಯಶಸ್ಸು ನಿಮ್ಮದಾಗುವುದು. ಅದರಲ್ಲೂ ವಿಶೇಷವಾಗಿ ನವರಾತ್ರಿ ಮೂರನೇ ರಾತ್ರಿಯಲ್ಲಿ ಈ ದೇವಿಯನ್ನು ಪೂಜಿಸುವುದು ವಿಶೇಷವಾಗಿದೆ. ಇಲ್ಲವೇ ಶುಕ್ರವಾರ, ಮಂಗಳವಾರ, ದುರ್ಗಾಷ್ಟಮಿ, ಅಮವಾಸ್ಯೆ ದಿನದಂದೂ ದೇವಿಯ ಮಂತ್ರ ಹೇಳಿ ಪೂಜೆ ಮಾಡಬಹುದು.