Select Your Language

Notifications

webdunia
webdunia
webdunia
webdunia

Sade Sati Shani 2025: ಶನಿಯ ಈ ಮಂತ್ರಗಳನ್ನು ಜಪಿಸಿದರೆ ಸಾಡೇಸಾತಿ ಶನಿಯಿಂದ ಮುಕ್ತಿ

Shani God

Krishnaveni K

ಬೆಂಗಳೂರು , ಶನಿವಾರ, 7 ಡಿಸೆಂಬರ್ 2024 (08:41 IST)
ಬೆಂಗಳೂರು: ಇಂದು ಶನಿವಾರವಾಗಿದ್ದು ಶನಿದೇವನಿಗೆ ವಿಶೇಷವಾದ ದಿನವಾಗಿದೆ. ಈ ದಿನ ಶನಿದೇವನನ್ನು ಕುರಿತ ಈ ಮಂತ್ರಗಳನ್ನು ಪಠಿಸುವುದರಿಂದ ಸಾಡೇಸಾತಿ ಶನಿ ದೋಷಗಳು ತಕ್ಕಮಟ್ಟಿಗೆ ಕಡಿಮೆಯಾಗುವುದು.

ಶನಿಯು ಕರ್ಮಕಾರಕನಾಗಿದ್ದು ನಾವು ಮಾಡುವ ಕರ್ಮಗಳಿಗೆ ಅನುಸಾರವಾಗಿ ಫಲವನ್ನು ಕೊಡುತ್ತಾನೆ. ಶನಿ ದೋಷ ಅದರಲ್ಲೂ ಸಾಡೇಸಾತಿ ಶನಿ ದೋಷ ಮೂರು ಆಯಾಮಗಳಲ್ಲಿ ನಮ್ಮನ್ನು ಕಾಡುತ್ತದೆ. ಮೂರೂ ಆಯಾಮಗಳೂ ಒಂದೊಂದು ರೀತಿಯಲ್ಲಿ ನಮ್ಮನ್ನು ಕಡು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಶನಿಯ ಸಾಡೇಸಾತಿ ಪ್ರಭಾವ ಕಡಿಮೆಯಾಗಬೇಕೆಂದರೆ ಈ ಸ್ತೋತ್ರವನ್ನು ಪಠಿಸಬೇಕು:

ಓಂ ಶನ್ನೋದೇವಿರಾಭಿಷ್ಟಯ ಅಪೋ ಭವಂತು ಶನ್ಯೋರಭಿಸ್ತವಂತು ನಃ

ಈ ಮಂತ್ರವನ್ನು ಒಟ್ಟು 23 ಸಾವಿರ ಬಾರಿ ಹೇಳುವುದರಿಂದ ಸಾಡೇ ಸಾತಿಯ ಕೆಟ್ಟ ಪ್ರಭಾವಗಳು ತಕ್ಕ ಮಟ್ಟಿಗೆ ಕಡಿಮೆಯಾಗುವುದು. ಇನ್ನೊಂದು ಮಂತ್ರ ಹೀಗಿದೆ:

ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ

ಈ ಮಂತ್ರವನ್ನು ಪಠಿಸುವುದರ ಜೊತೆಗೆ ಶನಿವಾರಗಳಂದು ಶನಿ ದೇವನಿಗೆ ಎಳ್ಳೆಯನ್ನು ಸಮರ್ಪಿಸುವುದರಿಂದ ಶನಿ ದೋಷದ ಪ್ರಭಾವ ಕಡಿಮೆಯಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?