Select Your Language

Notifications

webdunia
webdunia
webdunia
webdunia

ಉದ್ಯೋಗದಲ್ಲಿ ಯಶಸ್ಸು ಸಿಗಬೇಕಾದರೆ ಈ ಮೂರು ಮಂತ್ರಗಳನ್ನು ಪ್ರತಿನಿತ್ಯ ಹೇಳಿ

Astrology

Krishnaveni K

ಬೆಂಗಳೂರು , ಮಂಗಳವಾರ, 25 ಜೂನ್ 2024 (08:32 IST)
ಬೆಂಗಳೂರು: ಕೆಲವರಿಗೆ ಉದ್ಯೋಗ ಸಿಗುವ ಚಿಂತೆಯಾದರೆ ಮತ್ತೆ ಕೆಲವರಿಗೆ ಸಿಕ್ಕ ಉದ್ಯೋಗವನ್ನು ಉಳಿಸಿಕೊಳ್ಳುವ ಚಿಂತೆ. ಉದ್ಯೋಗದಲ್ಲಿ ಯಶಸ್ವಿಯಾಗಬೇಕಾದರೆ ಈ ಮೂರು ಮಂತ್ರಗಳನ್ನು ಜಪಿಸಿ. ಹೇಗೆ ಇಲ್ಲಿ ನೋಡಿ.

ಉದ್ಯೋಗ ಸಿಕ್ಕ ಮೇಲೆ ಪ್ರತಿಯೊಬ್ಬ ವ್ಯಕ್ತಿಯೂ ಮೇಲಧಿಕಾರಿಗಳಿಂದ ಭೇಷ್ ಎನಿಸಿಕೊಳ್ಳಬೇಕು, ಬಡ್ತಿ ಪಡೆಯಬೇಕು ಎಂದು ಯೋಚಿಸುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಅದಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂಬ ನಿರಾಸೆ ಕಾಡಬಹುದು. ಇಂತಹ ಸಂದರ್ಭದಲ್ಲಿ ಈ ಮೂರು ಮಂತ್ರವನ್ನು ಜಪಿಸಿ.

ಮೊದಲನೆಯದಾಗಿ ಮಹಾ ಮೃತ್ಯುಂಜಯ ಮಂತ್ರ. ಕೇವಲ ರೋಗ ಭಯ ನಾಶಕ್ಕಾಗಿ ಮಾತ್ರವಲ್ಲ, ಉದ್ಯೋಗದಲ್ಲಿ ಯಶಸ್ವಿಯಾಗಬೇಕಾದರೂ ಪ್ರತಿನಿತ್ಯ ‘ಓಂ ತ್ರಯಂಬಕಂ’ ಎಂದು ಆರಂಭವಾಗುವ ಮಹಾ ಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಬೇಕು.

ಎರಡನೆಯದಾಗಿ ಉದ್ಯೋಗದಲ್ಲಿ ಅಡೆತಡೆಗಳಿಗೆ ಪ್ರಮುಖವಾಗಿ ಕಾರಣವಾಗುವುದು ಶನಿದೇವನ ಅವಕೃಪೆ. ಹೀಗಾಗಿ ಶನಿ ಸಂತೃಪ್ತನಾಗುವಂತೆ ಮಾಡಲು ಪ್ರತಿ ಶನಿವಾರದಂದು ಶನಿ ಮಂತ್ರವನ್ನು ಜಪಿಸಿ. ಇದಲ್ಲದೇ ಹೋದರೆ ಪ್ರತಿನಿತ್ಯ ಸೂರ್ಯೋದಯ ಕಾಲದಲ್ಲಿ ಸೂರ್ಯನಿಗೆ ಅರ್ಘ್ಯ ಬಿಡುತ್ತಾ ಗಾಯತ್ರಿ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ಉದ್ಯೋಗ ಸಂಬಂಧವಾದ ಸಮಸ್ಯೆಗಳು ಸರಿಹೋಗುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?