Select Your Language

Notifications

webdunia
webdunia
webdunia
webdunia

ಶತ್ರುಭಯ ನಾಶಕ್ಕಾಗಿ ಈ ಪವರ್ ಫುಲ್ ಮಂತ್ರ ಹೇಳಿರಿ

Astrology

Krishnaveni K

ಬೆಂಗಳೂರು , ಗುರುವಾರ, 13 ಜೂನ್ 2024 (09:07 IST)
ಬೆಂಗಳೂರು: ಕೆಲವೊಂದು ಮಂತ್ರ, ಶ್ಲೋಕಗಳನ್ನು ಶತ್ರುಬಾಧೆಗಳನ್ನು ನಿವಾರಿಸಿ, ಮನಸ್ಸಿನ ಧೈರ್ಯ ಹೆಚ್ಚಿಸುತ್ತವೆ. ಶತ್ರುಬಾಧೆ ನಿವಾರಣೆಗಾಗಿ ಹೇಳಬೇಕಾದ ಶ್ಲೋಕಗಳು ಯಾವುವು ನೋಡೋಣ.

ಗಣಪತಿ ವಿಘ್ನ ನಿವಾರಕ ಜೊತೆಗೆ ನಮ್ಮಲ್ಲಿ ಶಕ್ತಿ, ಸ್ಥೈರ್ಯ ತುಂಬುವ ದೇವರು. ಹೀಗಾಗಿ ಗಣಪತಿ ಮಂತ್ರವನ್ನು ಹೇಳುತ್ತಾ ದಿನದಾರಂಭ ಮಾಡಿದರೆ ಉತ್ತಮ. ಶತ್ರುಬಾಧೆ ನಿವಾರಣೆಗೆ ಮುಖ್ಯವಾಗಿ ಹೇಳಬೇಕಾದ ಶ್ಲೋಕವೆಂದರೆ  ಮಹಾಮೃತ್ಯುಂಜಯ ಮಂತ್ರ.
‘ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ್’
ಎಂಬ ಮಂತ್ರವನ್ನು ಪ್ರತಿನಿತ್ಯ ತಪ್ಪಿಲ್ಲದೇ ಉಚ್ಚಾರಣೆ ಮಾಡಿ. ಇದರಿಂದ ಶತ್ರುಬಾಧೆ ಮಾತ್ರವಲ್ಲ, ರೋಗ ಭಯವೂ ನಾಶವಾಗವುದು.

ದುರ್ಗಾ ದೇವಿ ಧೈರ್ಯ, ಸಾಹಸಕ್ಕೆ ಇನ್ನೊಂದು ಹೆಸರು. ಶತ್ರು ನಾಶ ಮಾಡುವ ಸಾಮರ್ಥ್ಯವಿರುವ ದೇವಿ. ಶತ್ರುಬಾಧೆ ಇದ್ದಾಗ ದೇವಿಗೆ ಸಂಬಂಧಿಸಿದ ಈ ಶ್ಲೋಕವನ್ನು ಪಠಿಸಿ
‘ಓಂ ಕಾತ್ಯಾಯನೇ ಚ ವಿದ್ಮಹೆ ಕನ್ಯಾಕುಮಾರೈ ಧೀಮಹಿ
ತನ್ನೋ ದೇವಿ ಪ್ರಚೋದಯಾತ್’ ಎಂಬ ಮಂತ್ರವನ್ನು ಪ್ರತಿನಿತ್ಯ ಜಪಿಸುತ್ತಿದ್ದರೆ ಶತ್ರುಬಾಧೆ ನಿವಾರಣೆ ಜೊತೆಗೆ ಮಾನಸಿಕವಾಗಿ ಹೊಸ ಚೈತನ್ಯ ಮೂಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?