Select Your Language

Notifications

webdunia
webdunia
webdunia
webdunia

ತುಳಸಿ ಗಿಡ ನೆಡುವಾಗ ಈ ಕೆಲವೊಂದು ನಿಯಮ ಪಾಲಿಸಿ

Tulsi

Krishnaveni K

ಬೆಂಗಳೂರು , ಬುಧವಾರ, 5 ಜೂನ್ 2024 (09:22 IST)
ಬೆಂಗಳೂರು: ಪ್ರತಿಯೊಬ್ಬ ಹಿಂದೂ ಆಸ್ತಿಕರ ಮನೆಯ ಮುಂದೆ ತುಳಸಿ ಗಿಡವೊಂದು ಇದ್ದೇ ಇರುತ್ತದೆ. ತುಳಸಿಯನ್ನು ದೇವತೆಯ ಸಮಾನವೆಂದು ಪೂಜೆ ಮಾಡುತ್ತೇವೆ. ಹಾಗಾಗಿ ತುಳಸಿ ಗಿಡ ನೆಡುವಾಗ ಕೆಲವೊಂದು ನಿಯಮ ಪಾಲಿಸಲೇಬೇಕು.

ತುಳಸಿ ಗಿಡವನ್ನು ಎಲ್ಲೆಂದರಂತೆ ಅಲ್ಲಿ ನೆಡಲು ಸಾಧ್ಯವಾಗದು. ಮಣ್ಣಿನ ಪಾಟ್ ಅಥವಾ ಅದಕ್ಕೆಂದೇ ಪ್ರತ್ಯೇಕವಾಗಿ ನಿರ್ಮಿಸಲಾಗಿರುವ ಕಟ್ಟೆಯಲ್ಲಿ ನೆಡಬೇಕು. ತುಳಸಿ ಗಿಡ ಯಾವತ್ತೂ ಮನೆಯ ಪೂರ್ವ ದಿಕ್ಕಿನಲ್ಲಿಡಬೇಕು.

ತುಳಸಿ ಗಿಡವನ್ನು ನೆಡುವಾಗ ಅಥವಾ ಸೊಪ್ಪು ಕೊಯ್ಯುವಾಗ ಅಶುದ್ಧವಾಗಿರಬಾರದು. ಯಾಕೆಂದರೆ ತುಳಸಿ ಮಾತೆಗೆ ಇದರಿಂದ ಅಪಮಾನವಾದಂತಾಗುತ್ತದೆ. ಅದರಲ್ಲೂ ಆದಷ್ಟು ಬೆಳಗಿನ ಹೊತ್ತೇ ತುಳಸಿ ದಳವನ್ನು ಕೊಯ್ಯಬೇಕು.

ಆದಷ್ಟು ತುಳಸಿ ಗಿಡವನ್ನು ಗುರುವಾರ ಅಥವಾ ಶುಕ್ರವಾರದಂದು ನೆಟ್ಟರೆ ಶುಭ.  ಈ ದಿನಗಳಲ್ಲಿ ತುಳಸಿ ನೆಟ್ಟರೆ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ದೂರವಾಗಿ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಹಾಗೆಯೇ ಪ್ರತಿನಿತ್ಯ ತುಳಸಿ ಮುಂದೆ ಒಂದು ದೀಪ ಹಚ್ಚಿ ಪೂಜಿಸಿದರೆ ಇನ್ನೂ ಶ್ರೇಷ್ಠ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?