ಇಂದು ಬುಧವಾರವಾಗಿದ್ದು ಗಣೇಶನಿಗೆ ವಿಶೇಷವಾದ ದಿನವಾಗಿದೆ. ಗಣೇಶ ವಿದ್ಯಾ, ಬುದ್ಧಿ ಪ್ರದಾಯಕ ಮತ್ತು ವಿಘ್ನ ನಿವಾರಕ ಎಂದೇ ಪರಿಗಣಿಸಲ್ಪಡುತ್ತಾನೆ. ಆದರೆ ಇದರ ಜೊತೆಗೆ ಅದೃಷ್ಟ ಪ್ರಾಪ್ತಿಯಾಗಬೇಕೆಂದರೆ ಗಣೇಶನ ಈ ಒಂದು ಮಂತ್ರವನ್ನು ತಪ್ಪದೇ ಜಪಿಸಿ.
ಇನ್ನೇನು ಗಣೇಶ ಚತುರ್ಥಿ ಬರುತ್ತಿದ್ದು, ಗಣೇಶನ ಆರಾಧನೆ ಮಾಡಲು ಸುಸಂದರ್ಭ. ಗಣೇಶನನ್ನು ಆದಿ ಪೂಜಿತ ಎಂದು ಕರೆಯುತ್ತಾರೆ. ಅವನು ಮಕ್ಕಳಿಗೂ ವಿದ್ಯೆ, ಬುದ್ಧಿ ಕೊಟ್ಟು ಸನ್ಮಾರ್ಗದಲ್ಲಿ ನಡೆಯಲು ಸಹಾಯ ಮಾಡುತ್ತಾನೆ.
ಜೊತೆಗೆ ಗಣೇಶನ ಅನುಗ್ರಹವಿದ್ದರೆ ಆರ್ಥಿಕ ಸಮಸ್ಯೆಗಳು, ಅಡೆತಡೆಗಳು ಯಾವುದೂ ಬರದು. ವಿಶೇಷವಾಗಿ ನಮ್ಮ ಜೀವನದಲ್ಲಿ ಸುಖ, ಸಮೃದ್ಧಿ ನೆಲೆಸಿರಬೇಕಾದರೆ ಗಣೇಶನ ಈ ಸೌಭಾಗ್ಯ ಮಂತ್ರವನ್ನು ತಪ್ಪದೇ ಜಪಿಸಬೇಕು.
“ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ವರವರದ
ಸರ್ವಜನಂ ಮೇ ವಶಮಾನಾಯ ನಮಃ”
ಇದು ಗಣೇಶನ ಸೌಭಾಗ್ಯ ಮಂತ್ರವಾಗಿದ್ದು ಉತ್ತಮ ಭವಿಷ್ಯಕ್ಕಾಗಿ, ಸಮೃದ್ಧಿಗಾಗಿ ಪ್ರತಿನಿತ್ಯ ಈ ಮಂತ್ರವನ್ನು ಪಠಿಸುತ್ತಿರಬೇಕು.