Select Your Language

Notifications

webdunia
webdunia
webdunia
webdunia

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

Anjaneya swamy

Krishnaveni K

ಬೆಂಗಳೂರು , ಮಂಗಳವಾರ, 5 ಆಗಸ್ಟ್ 2025 (08:22 IST)
ಇಂದು ಮಂಗಳವಾರವಾಗಿದ್ದು ಆಂಜನೇಯಸ್ವಾಮಿಗೆ ವಿಶೇಷವಾದ ದಿನವಾಗಿದೆ. ಈ ದಿನ ಹನುಮಾನ್ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ.

ವಿಶೇಷವಾಗಿ ಆಂಜನೇಯ ಸ್ವಾಮಿ ವಿದ್ಯೆ, ಬುದ್ಧಿ, ಉದ್ಯೋಗ, ಆರೋಗ್ಯ ಕರುಣಿಸುವವನು. ಆಂಜನೇಯ ಸ್ವಾಮಿ ಅಪಾರ ಬುದ್ಧಿವಂತ ಎಂಬ ಪ್ರತೀತಿಯಿದೆ. ಈ ಕಾರಣಕ್ಕೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದ ಒಳಿತಾಗುವುದು.

ಆಂಜನೇಯ ಸ್ವಾಮಿಯು ನಮಗೆ ವಿದ್ಯೆ ಮಾತ್ರವಲ್ಲ ಉದ್ಯೋಗ ಪ್ರಾಪ್ತಿಗಾಗಿ, ಉದ್ಯೋಗದಲ್ಲಿರುವ ತೊಡಕು ನಿವಾರಣೆಯಾಗಿ ಉನ್ನತ ಹಂತಕ್ಕೇರಲು ಅನುಗ್ರಹಿಸುತ್ತಾನೆ. ಅದಕ್ಕಾಗಿ ಆಂಜನೇಯ ಸ್ವಾಮಿಯ ಕುರಿತಾದ ಈ ಒಂದು ಮಂತ್ರವನ್ನು ತಪ್ಪದೇ ಪಠಿಸಬೇಕು.

ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ

ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಇನ್ನೂ ಶ್ರೇಯಸ್ಕರ. ಬೆಳಿಗ್ಗೆ 11 ಬಾರಿ ಈ ಮಂತ್ರವನ್ನು ಜಪಿಸಿ. ಕೇವಲ ಉದ್ಯೋಗದ ತೊಡಕುಗಳು ಮಾತ್ರವಲ್ಲ, ವಿದ್ಯಾಭ್ಯಾಸದಲ್ಲೂ ಪ್ರಗತಿ ಸಾಧಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ