Select Your Language

Notifications

webdunia
webdunia
webdunia
Thursday, 10 April 2025
webdunia

ಮನೆಯಲ್ಲಿ ಪ್ರತಿದಿನ ಶಂಖದಿಂದ ಹೀಗೆ ಮಾಡಿದರೆ ಕೆಟ್ಟ ದೃಷ್ಟಿ ಬೀಳೋದಿಲ್ಲವಂತೆ

ಬೆಂಗಳೂರು
ಬೆಂಗಳೂರು , ಶನಿವಾರ, 13 ಏಪ್ರಿಲ್ 2019 (10:07 IST)
ಬೆಂಗಳೂರು : ಮನೆಯಲ್ಲಿ ಸುಖ ಶಾಂತಿ ಸದಾ ನೆಲೆಸಿರಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಕೆಟ್ಟ ದೃಷ್ಟಿ ಬೀಳದಂತೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಹಾಗೇ  ಮನೆಯಲ್ಲಿ ದಕ್ಷಿಣ ಮುಖದ ಶಂಖವಿಟ್ಟು ಪೂಜೆ ಮಾಡಿದರೆ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ.


ಹೌದು. ಮನೆಯಲ್ಲಿ ದಕ್ಷಿಣ ಮುಖದ ಶಂಖವಿಟ್ಟರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯ ಮಹಿಳೆ ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ದಕ್ಷಿಣ ಮುಖದ ಶಂಖದಿಂದ ಮನೆಯನ್ನು ಶುದ್ಧಗೊಳಿಸಬೇಕು. ನಂತರ ಕೆಂಪು ಬಣ್ಣದ ಬಟ್ಟೆಯಲ್ಲಿ ದಕ್ಷಿಣ ಮುಖದ ಶಂಖವನ್ನು ಇಡಬೇಕು. ಅದಕ್ಕೆ ಗಂಗಾ ಜಲವನ್ನು ಹಾಕಬೇಕು. ಧೂಪ-ದೀಪ ಹಚ್ಚಿ ಶಂಖವನ್ನು ಪೂಜೆ ಮಾಡಿ.


ಶಂಖದ ಮುಂದೆ ಕುಳಿತು ಮಂತ್ರ ಜಪಿಸಿದ ನಂತರ ಮನೆ, ಮಕ್ಕಳು, ಪತಿ ಮೇಲೆ ಪ್ರೋಕ್ಷಣೆ ಮಾಡಿ. ಈ ಉಪಾಯವನ್ನು ಪ್ರತಿ ದಿನ ಮಾಡುವುದ್ರಿಂದ ನಕಾರಾತ್ಮಕ ಶಕ್ತಿ ದೂರವಾಗಿ ದೃಷ್ಟಿ ಬೀಳುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಜ ಗ್ರಹದ ಪ್ರಭಾವ ಕಡಿಮೆಯಾಗಲು ಏನು ಮಾಡಬೇಕು?