Select Your Language

Notifications

webdunia
webdunia
webdunia
webdunia

ಇನ್ಮುಂದೆ ಭಾರತ ಬಿಟ್ಟು ಈ ದೇಶಕ್ಕೆ ಶಿಫ್ಟ್ ಆಗಲಿದ್ದಾರಂತೆ ವಿರಾಟ್ ಕೊಹ್ಲಿ, ಅನುಷ್ಕಾ ದಂಪತಿ

Anushka Sharma-Virat Kohli

Krishnaveni K

ಮುಂಬೈ , ಮಂಗಳವಾರ, 19 ಮಾರ್ಚ್ 2024 (16:06 IST)
ಮುಂಬೈ: ಇತ್ತೀಚೆಗಷ್ಟೇ ಪುತ್ರನನ್ನು ಬರಮಾಡಿಕೊಡಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತವನ್ನೇ ಬಿಟ್ಟು ವಿದೇಶದಲ್ಲಿ ಸೆಟ್ಲ್ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
 

ಲಂಡನ್ ನಲ್ಲಿ ಅನುಷ್ಕಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಅನುಷ್ಕಾ ಜೊತೆ ವಿರಾಟ್ ಕೂಡಾ ಕಳೆದ ಕೆಲವು ದಿನಗಳಿಂದ ಲಂಡನ್ ನಲ್ಲಿಯೇ ಇದ್ದರು. ಇದೀಗ ಐಪಿಎಲ್ ಆಡುವ ಸಲುವಾಗಿ ಭಾರತಕ್ಕೆ ಬಂದಿದ್ದಾರೆ. ಆದರೆ ಕೊಹ್ಲಿ ಮತ್ತೆ ಲಂಡನ್ ಗೆ ತೆರಳುವ ಸಾಧ್ಯತೆಯಿದೆ.

ಇನ್ನೊಂದು ಮೂಲಗಳ ಪ್ರಕಾರ ಕೊಹ್ಲಿ ದಂಪತಿ ಇನ್ನು ಮುಂದೆ ಕೆಲವು ಸಮಯ ಮುಂಬೈ ಬಿಟ್ಟು ಲಂಡನ್ ನಲ್ಲಿಯೇ ನೆಲೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಮತ್ತು ಮಕ್ಕಳು ಇನ್ನೂ ಭಾರತಕ್ಕೆ ಬಂದಿಲ್ಲ. ಹೀಗಾಗಿಯೇ ಕೊಹ್ಲಿ ದಂಪತಿ ಲಂಡನ್ ಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ತಮ್ಮ ಮಕ್ಕಳಾದ ವಮಿಕಾ ಮತ್ತು ಅಕಾಯ್ ಗೆ ಪ್ರೈವೆಸಿ ಕೊಡಲು ದಂಪತಿ ವಿದೇಶದಲ್ಲಿ ನೆಲೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.  ಇದಕ್ಕಾಗಿ ವಿರಾಟ್ ದಂಪತಿ ಲಂಡನ್ ನಲ್ಲಿಯೇ ಹೊಸ ಮನೆ ಖರೀದಿಸಬಹುದೇ ಅಥವಾ ಅವರ ಮುಂದಿನ ಯೋಜನೆ ಏನಿರಬಹುದು ಎಂಬ ಬಗ್ಗೆ ಐಪಿಎಲ್ ಬಳಿಕ ಉತ್ತರ ಸಿಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಆಡುವುದಕ್ಕೆ ಕೆಎಲ್ ರಾಹುಲ್ ಫಿಟ್, ಆದ್ರೆ ಒಂದು ಷರತ್ತು