ಲಕ್ನೋ: ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡಿದ್ದು ಐಪಿಎಲ್ 2024 ಆಡಲು ಸಜ್ಜಾಗಿದ್ದಾರೆ. ಆದರೆ ಅದರ ಜೊತೆಗೆ ತಜ್ಞರು ಇನ್ನೊಂದು ಎಚ್ಚರಿಕೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ತೊಡೆನೋವಿಗೊಳಗಾಗಿದ್ದ ರಾಹುಲ್ ಬಳಿಕ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ನಂತರ ಅವರು ಫಿಟ್ ಆಗಿದ್ದರೂ ಮತ್ತೆ ನೋವು ಕಾಣಿಸಿಕೊಂಡಿದ್ದರಿಂದ ಬಿಸಿಸಿಐ ಅವರನ್ನು ಇಂಗ್ಲೆಂಡ್ ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿತ್ತು.
ಇದಾದ ಬಳಿಕ ಭಾರತಕ್ಕೆ ಮರಳಿದ್ದ ರಾಹುಲ್ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ರಾಹುಲ್ ಆಡಲು ಫಿಟ್ ಆಗಿದ್ದಾರೆ. ಆದರೆ ತಜ್ಞರು ಅವರಿಗೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಸದ್ಯಕ್ಕೆ ರಾಹುಲ್ ಕೇವಲ ಬ್ಯಾಟಿಂಗ್ ಮಾತ್ರ ಮಾಡಬಹುದಾಗಿದೆ.
ರಾಹುಲ್ ಕಳೆದ ಸೀಸನ್ ಗಳಲ್ಲಿ ಬ್ಯಾಟಿಂಗ್ ಜೊತೆ ವಿಕೆಟ್ ಕೀಪಿಂಗ್ ಕೂಡಾ ಮಾಡುತ್ತಿದ್ದರು. ಆದರೆ ಈ ಸೀಸನ್ ನಲ್ಲಿ ಅವರು ಬ್ಯಾಟಿಂಗ್ ಮಾಡಲು ಫಿಟ್ ಆಗಿದ್ದರೂ ಕೀಪಿಂಗ್ ಸದ್ಯಕ್ಕೆ ಬೇಡ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಲಕ್ನೋ ಪರ ಈ ಬಾರಿ ರಾಹುಲ್ ಕೀಪಿಂಗ್ ಮಾಡುವುದು ಅನುಮಾನ.