ಉಪ್ಪಿ 'ಸೂಪರ್' ಡಿ.3ಕ್ಕೆ ತೆರೆಗೆ; ಇಲ್ಲಿದೆ ಫೋಟೋ ಗ್ಯಾಲರಿ
ಉಪೇಂದ್ರ ಬರೋಬ್ಬರಿ ಹತ್ತು ವರ್ಷಗಳ ನಂತರ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷೆಯ 'ಸೂಪರ್' ಚಿತ್ರ ಇದೇ ಡಿಸೆಂಬರ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಅಶೋಕ್ ಕಶ್ಯಪ್ ಕ್ಯಾಮರಾ ಹಿಡಿದಿದ್ದಾರೆ. ವಿ. ಹರಿಕೃಷ್ಣ ಅವರದ್ದು ಸಂಗೀತ. ಯೋಗರಾಜ್ ಭಟ್, ವಿ. ಮನೋಹರ್ ಮತ್ತು ಸ್ವತಃ ಉಪೇಂದ್ರ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.ನಯನತಾರಾ ಮತ್ತು ತುಲಿಪ್ ಜೋಷಿ ನಾಯಕಿಯರಾಗಿರುವ ಚಿತ್ರದ ಕನ್ನಡ ಮತ್ತು ತೆಲುಗು ಆವೃತ್ತಿಗಳು ಡಿಸೆಂಬರ್ 3ರಂದು ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಬಿಡುಗಡೆಯಾಗಲಿವೆ. ತೆಲುಗು ಆವೃತ್ತಿ ವಿದೇಶದಲ್ಲಿ ಅದೇ ದಿನ ಬಿಡುಗಡೆಯಾಗುತ್ತಿದೆ.ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..
ಕಥೆ ಬಿಟ್ಟುಕೊಟ್ಟಿಲ್ಲ...ಸೂಪರ್ ಚಿತ್ರದ ಕಥೆಯೇನು ಎಂದು ಇದುವರೆಗೂ ಉಪೇಂದ್ರ ಎಲ್ಲೂ ಬಾಯ್ಬಿಟ್ಟಿಲ್ಲ. ತಾನು ಈ ಹಿಂದೆ ಯಾವುದೇ ಚಿತ್ರದಲ್ಲೂ ಕಥೆಯನ್ನು ಹೇಳಿಲ್ಲ. ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ, ಆಗ ಕಥೆ ಏನೆಂಬುದು ನಿಮಗೆ ತಿಳಿಯುತ್ತದೆ ಎಂದು ಉಪ್ಪಿ ಹೇಳಿದ್ದಾರೆ.ಅದೇ ಹೊತ್ತಿಗೆ ಹೆಚ್ಚು ನಿರೀಕ್ಷೆಗಳನ್ನು ಕೂಡ ಇಟ್ಟುಕೊಳ್ಳದಿರಿ ಎಂದು ಅಭಿಮಾನಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ. ನಿರಾಳರಾಗಿ ಚಿತ್ರಮಂದಿರಕ್ಕೆ ಬನ್ನಿ. ನೀವು ನೀಡುವ ಅಭಿಪ್ರಾಯಗಳನ್ನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ. ಕೆಟ್ಟದಾಗಿದೆ ಎಂದು ನೀವು ಹೇಳಿದರೂ ನಾನು ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಉಪೇಂದ್ರ ನಿರೀಕ್ಷಣಾ ಜಾಮೀನು ಕೂಡ ಪಡೆದುಕೊಂಡಿದ್ದಾರೆ.