Daily Horoscope
✕

ಗ್ಯಾಸ್ಟ್ರಿಕ್ ಸಮಸ್ಯೆಯೇ ಹಾಗಿದ್ದರೆ ಈ ಯೋಗ ಮಾಡಿ

Krishnaveni K
ಸೋಮವಾರ, 19 ಫೆಬ್ರವರಿ 2024 (12:05 IST)
Photo Courtesy: Twitter
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ನಮ್ಮ ಆಹಾರ ಶೈಲಿಯಿಂದಾಗಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿದೆ.

ಮಸಾಲ, ಖಾರದ ವಸ್ತು ತಿನ್ನುವ ಹಾಗಿಲ್ಲ, ಖಾಲಿ ಹೊಟ್ಟೆ ಬಿಡುವಂತಿಲ್ಲ. ಎದೆ ಉರಿ, ಹೊಟ್ಟೆ ಉಬ್ಬರ, ಗಂಟಲು ಉರಿ, ಹೊಟ್ಟೆ ಉರಿ ಇತ್ಯಾದಿ ಗ್ಯಾಸ್ಟ್ರಿಕ್ ಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುತ್ತೇವೆ. ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅನೇಕ ಔಷಧಿ, ಮನೆ ಮದ್ದುಗಳನ್ನು ಮಾಡಿ ಬೇಸತ್ತಿದ್ದೀರಾ? ಹಾಗಿದ್ದರೆ ಯೋಗಾಸನ ಟ್ರೈ ಮಾಡಿ ನೋಡಬಹುದು. ಯೋಗಾಸನದಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದಕ್ಕಾಗಿ ನೀವು ಪ್ರತಿನಿತ್ಯ ಪವನ ಮುಕ್ತಾಸನ ಮಾಡಿದರೆ ಸಾಕು.

ಪವನ ಮುಕ್ತಾಸನ ಮಾಡುವುದು ಹೇಗೆ?
ಈ ಆಸನದಿಂದ ನಿಮ್ಮ ಕೆಳಹೊಟ್ಟೆ,  ಸೊಂಟ, ತೊಡೆ ಮತ್ತು ಪೃಷ್ಟಕ್ಕೂ ರಿಲೀಫ್ ಸಿಗುತ್ತದೆ.
  1. ಸಮತಟ್ಟಾದ ನೆಲದ ಮೇಲೆ ಅಂಗಾತ ಮಲಗಿ ಕಾಲುಗಳನ್ನು ಮಾತ್ರ 90 ಡಿಗ್ರಿ ನೇರಕ್ಕೆ ಬಾಗಿಸಿ
  2. ಈಗ ಎರಡೂ ಮೊಣಕಾಲನ್ನು ಬಾಗಿಸಿ ತೊಡೆಯನ್ನು ಸೊಂಟದ ಭಾಗಕ್ಕೆ ತನ್ನಿ.
  3. ಮೊಣಕಾಲು ಮತ್ತು ಪಾದವನ್ನು ಸೇರಿಸಿ ಇರಿಸಿ.
  4. ಕೈಗಳನ್ನು ಕಾಲುಗಳ ಸುತ್ತ ಹಾಕಿ
  5. ಕೈ ಬೆರಳುಗಳನ್ನು ಬೆಸೆದುಕೊಂಡು ಕಾಲುಗಳನ್ನು ಹಿಡಿದಿಟ್ಟುಕೊಳ್ಳಿ.
  6. ಕುತ್ತಿಗೆಯನ್ನು ಕೊಂಚ ಎತ್ತಿ ಎದೆಯ ಭಾಗಕ್ಕೆ ಗಲ್ಲ ತಾಕಿಸಿ.
ಇದೇ ರೀತಿ 20 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಂಡು ಮತ್ತು ಬಿಟ್ಟುಕೊಂಡು ಸುಮಾರು 1 ನಿಮಿಷಗಳ ಕಾಲ ಕಸರತ್ತು ಮಾಡಿದರೆ ಸಾಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಬೆಚ್ಚಗಿಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಅತ್ಯುತ್ತಮ ಆಹಾರಗಳು

ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಉಪಾಯ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು

ಮುಂದಿನ ಸುದ್ದಿ
Show comments