Select Your Language

Notifications

webdunia
webdunia
webdunia
webdunia

ಮಲಬದ್ಧತೆ ನಿವಾರಣೆಗೆ ಸರಳ ಯೋಗ

Yoga

Krishnaveni K

ಬೆಂಗಳೂರು , ಗುರುವಾರ, 15 ಫೆಬ್ರವರಿ 2024 (14:20 IST)
ಬೆಂಗಳೂರು: ಇಂದಿನ ಆಹಾರ ಶೈಲಿ ಮತ್ತು ಜೀವನ ಶೈಲಿಯಿಂದಾಗಿ ಅನೇಕರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಿದ್ದರೆ ಮಲಬದ್ಧತೆ ಸಮಸ್ಯೆಗೆ ಪರಿಹಾರವೇನು?

ಮಲಬದ್ಧತೆ ಪರಿಹಾರವಾಗಬೇಕಾದರೆ ದೇಹಕ್ಕೆ ಸಾಕಷ್ಟು ಫೈಬರ್ ಅಂಶ ಮತ್ತು ನೀರಿನಂಶವಿರುವ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. ಅದರ ಜೊತೆಗೆ ಯೋಗವೂ ಮಲಬದ್ಧತೆ ನಿವಾರಣೆ ಮಾಡಲು ಸಹಕರಿಸುತ್ತದೆ. ಮಲಬದ್ಧತೆ ನಿವಾರಿಸಲು ಸಿಂಪಲ್ ಯೋಗ ಟ್ರಿಕ್ಸ್ ಇಲ್ಲಿದೆ ನೋಡಿ.

  • ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತಕೊಳ್ಳಿ
  • ಬಲಗಾಲನ್ನು ಬಾಗಿಸಿ ಬಲ ಪಾದವನ್ನು ನೆಲಕ್ಕೆ ಊರಿ ಕುಳಿತುಕೊಳ್ಳಿ. ಪಾದ ಮಡಚಿರುವ ಎಡಕಾಲಿನ ಮೊಣಕಾಲಿನ ಹೊರಭಾಗದಲ್ಲಿರುವಂತೆ ನೋಡಿಕೊಳ್ಳಿ.
  • ಈಗ ಎಡ ಕಾಲನ್ನು ಬಾಗಿಸಿ ಪೃಷ್ಟದ ಕೆಳಗೆ ಅಥವಾ ಸಮೀಪದಲ್ಲಿರುವಂತೆ ನೋಡಿಕೊಳ್ಳಿ.
  • ಎಡಕೈಯನ್ನು ಅಥವಾ ಮಣಿಗಂಟನ್ನು ಬಲ ಮೊಣಕಾಲಿನ ಬಳಿಯಿರುವಂತೆ ಇರಿಸಿ ಮತ್ತು ಮುಖವನ್ನು ಬಲ ಭುಜದ ಸಮೀಪ ತಂದು ಬಾಗಿಸಿ.
  • ಈ ಭಂಗಿಯಲ್ಲಿ ಕೆಲವು ಸಮಯ ಕುಳಿತುಕೊಳ್ಳಿ ಮತ್ತು ನಂತರ ಇನ್ನೊಂದು ಬದಿಯಲ್ಲೂ ಇದೇ ರೀತಿ ವಿಧಾನದಿಂದ ಕಾಲು ಮತ್ತು ಕೈಗಳನ್ನು ಬಾಗಿಸಿ ವ್ಯಾಯಾಮ ಮಾಡಿ. ಇದು ಮಲಬದ್ಧತೆ ನಿವಾರಣೆಗೆ ಉತ್ತಮ ಯೋಗ ವಿಧಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಮ್ಮಡಿ ಒಡೆಯುವುದಕ್ಕೆ ಮನೆ ಮದ್ದು