Select Your Language

Notifications

webdunia
webdunia
webdunia
webdunia

ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಸೋಲಲು ಬಯಸಿದ್ದರು ಧೋನಿ: ಯೋಗರಾಜ್ ಸಿಂಗ್

ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಸೋಲಲು ಬಯಸಿದ್ದರು ಧೋನಿ: ಯೋಗರಾಜ್ ಸಿಂಗ್
ಮುಂಬೈ , ಮಂಗಳವಾರ, 11 ಜುಲೈ 2023 (18:26 IST)
ಮುಂಬೈ: 2019 ಏಕದಿನ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಸೋತಿತ್ತು.

ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಧೋನಿ ಪಾಲಿಗೆ ಇದು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಧೋನಿ ನಿಧಾನಗತಿಯ ಆಟವಾಡಿದ್ದರು. ಕೊನೆಗೆ ರನೌಟ್ ಆಗುವುದರೊಂದಿಗೆ ಭಾರತದ ವಿಶ್ವಕಪ್ ಕನಸು ಭಗ್ನವಾಗಿತ್ತು.

ಆದರೆ ಧೋನಿ ಈ ರೀತಿ ನಿಧಾನಗತಿಯಲ್ಲಿ ಬೇಕೆಂದೇ ಆಡಿ ಆ ವಿಶ್ವಕಪ್ ನಲ್ಲಿ ಭಾರತ ಸೋಲುವಂತೆ ಮಾಡಿದರು. ಯಾಕೆಂದರೆ ಅವರಿಗೆ ತಮ್ಮನ್ನು ಹೊರತುಪಡಿಸಿ ಉಳಿದವರು ಯಾರೂ ವಿಶ್ವಕಪ್ ಗೆಲ್ಲುವುದು ಬೇಕಿರಲಿಲ್ಲ. ಹೀಗಾಗಿ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಸೋಲುವಂತೆ ಮಾಡಿದರು ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಯೋಗರಾಜ್ ಸಿಂಗ್ ಮಾಜಿ ನಾಯಕ ಧೋನಿ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ್ದರು. ತಮ್ಮ ಪುತ್ರ ಯುವರಾಜ್ ಸಿಂಗ್ ತಂಡದಲ್ಲಿ ಮೂಲೆ ಗುಂಪಾಗಲು ಧೋನಿಯೇ ಕಾರಣ ಎಂದೂ ಹೇಳಿದ್ದರು. ಇದೀಗ ಮತ್ತೊಮ್ಮೆ ಧೋನಿ ವಿರುದ್ಧ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾದೇಶ ವಿರುದ್ಧ ಹರ್ಮನ್ ಪ್ರೀತ್ ಕೌರ್ ಪಡೆಗೆ ಟಿ20 ಸರಣಿ ಗೆಲುವು