ವಿಶ್ವ ಯೋಗ ದಿನಾಚರಣೆ: ಮಕ್ಕಳು ಈ ಆಸನ ಮಾಡುವುದು ಬೆಸ್ಟ್

Krishnaveni K
ಶನಿವಾರ, 21 ಜೂನ್ 2025 (10:38 IST)
Photo Credit: X
ಬೆಂಗಳೂರು: ಇಂದು ವಿಶ್ವ ಯೋಗ ದಿನವಾಗಿದ್ದು, ಮಕ್ಕಳಿಗೆ ಯಾವ ಯೋಗಾಸನ ಮಾಡುವುದು ಉತ್ತಮ ಎಂದು ತಿಳಿಯೋಣ. ಮಕ್ಕಳು ಎಳವೆಯಲ್ಲೇ ಯೋಗಾಸನ ಮಾಡುವುದರಿಂದ ಅವರ ಆರೋಗ್ಯ ವೃದ್ಧಿಯಾಗುತ್ತದೆ.

ಮಕ್ಕಳು ಮಾಡಬಹುದಾದ ಬೆಸ್ಟ್ ಯೋಗಾಸನವೆಂದರೆ ಬಾಲಾಸನ. ಇದನ್ನು ಮಾಡುವುದರಿಂದ ಮಕ್ಕಳಲ್ಲಿ ಕಾಡುವ ಮೈ ಕೈ ನೋವಿನ ಸಮಸ್ಯೆ, ಮಾನಸಿಕ ಒತ್ತಡ ದೂರವಾಗುತ್ತದೆ. ಜೊತೆಗೆ ಮಕ್ಕಳು ಸುಲಭವಾಗಿ ಮೈ ಕೈ ಬಗ್ಗಿಸಿ ದೇಹವನ್ನು ದಂಡಿಸಲು ಯೋಗ್ಯವಾದ ಆಸನ ಇದಾಗಿದೆ.

ಬಾಲಾಸನ ಮಾಡುವುದು ಹೇಗೆ?
-ಒಂದು ಸಮತಲವಾದ ನೆಲದ ಮೇಲೆ ಮೊಣಕಾಲಿನ ಮೇಲೆ ಕುಳಿತು ಸೊಂಟವನ್ನು ಮುಂದಕ್ಕೆ ಚಾಚಿ. ಈಗ ನಿಮ್ಮ ಹಣೆ ಮತ್ತು ತೋಳುಗಳು ನೆಲಕ್ಕೆ ತಾಕಿರಬೇಕು.

-ಮೊದಲು ಪಾದಗಳನ್ನು ಪೃಷ್ಠದ ಕೆಳಗಿರಿಸಿ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.
- ಬಳಿಕ ಉಸಿರು ಎಳೆದುಕೊಂಡು ಕೈಗಳನ್ನು ಮೇಲೆತ್ತಬೇಕು.
-ಸೊಂಟವನ್ನು ಮುಂದೆ ಬಾಗಿಸಿ ಹಣೆಯನ್ನು ನೆಲಕ್ಕೆ ಮುಟ್ಟಿಸಿ.
-ಕೈಗಳನ್ನು ಮುಂದೆ ಚಾಚಿ ನೆಲಕ್ಕೆ ಮುಟ್ಟಿಸಿ
-ಇದೇ ಭಂಗಿಯಲ್ಲಿ ಕೆಲವು ನಿಮಿಷವಿದ್ದು ದೇಹವನ್ನು ಅದೇ ರೀತಿ ಹಿಂದಕ್ಕೆ ತಂದು ರಿಲ್ಯಾಕ್ಸ್ ಆಗಿ.

ಈ ಯೋಗಾಸನವನ್ನು ಯಾರು ಬೇಕಾದರೂ ಮಾಡಬಹುದು. ಅದರಲ್ಲೂ ವಿಶೇಷವಾಗಿ ಮಕ್ಕಳು ಸುಲಭವಾಗಿ ಮಾಡಬಹುದಾದ ಯೋಗಾಸನ ಇದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments