Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ ಸಮಸ್ಯೆಗಳಿಗೆ ರಾಮಬಾಣ ಈ ನೆಲ್ಲಿ!

ಮಹಿಳೆಯರಿಗೆ ಸಮಸ್ಯೆಗಳಿಗೆ ರಾಮಬಾಣ ಈ ನೆಲ್ಲಿ!
ಬೆಂಗಳೂರು , ಬುಧವಾರ, 17 ನವೆಂಬರ್ 2021 (14:48 IST)
ಹುಡುಗಿಯರು ಅತಿಯಾದ ಯೋನಿ ಡಿಸ್ಚಾರ್ಜ್ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆಯು ದೇಹವನ್ನು ದುರ್ಬಲಗೊಳಿಸುತ್ತದೆ.
ಇದು ಹಲವಾರು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಆದರೆ ಅದಕ್ಕೆ ಪರಿಹಾರ ಸಹ ಇದೆ. ಹೌದು, ನೆಲ್ಲಿಕಾಯಿಯಲ್ಲಿದೆ ಇದಕ್ಕೆ ಸೂಪರ್ ಪರಿಹಾರ ಹೇಗೆ ಎನ್ನುವುದು ಇಲ್ಲಿದೆ.
ಆಮ್ಲಾ ಬೀಜಗಳು ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಈ  ನೆಲ್ಲಿಕಾಯಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇವುಗಳಲ್ಲಿ ವಿಟಮಿನ್ ಸಿ ಇರುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದು ಕೂದಲು ಮತ್ತು ಚರ್ಮಕ್ಕೆ ಹೊಳಪನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಇದು ಯೋನಿ ಡಿಸ್ಚಾರ್ಚ್ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹಾಗಾಗಿ ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ನೆಲ್ಲಿಕಾಯಿಯನ್ನು ಯಾವುದೇ ಕಾರಣಕ್ಕೂ ಎಸೆಯಬೇಡಿ. ಅದರ ಸಿಪ್ಪೆ ಸುಲಿದು, ಅದನ್ನು ತುರಿ ಮಾಡಿ ಮತ್ತು ರಸವನ್ನು ಹಿಂಡಿಅಥವಾ ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ಮತ್ತೆ ಪೇಸ್ಟ್ ಮಾಡಿ. ಇದನ್ನು ದಿನಾ ಸ್ವಲ್ಪ ಸೇವನೆ ಮಾಡಿದರೆ ಶೀಘ್ರದಲ್ಲೇ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ ಸಿಗುತ್ತದೆ. ಈ ರೀತಿಯಾಗಿ ನೆಲ್ಲಿಕಾಯಿಯನ್ನು ಸೇವನೆ ಮಾಡುವುದು ನಿಮಗೆ ಬೇರೆ ಔಷಧಿಗಳನ್ನು ಸೇವನೆ ಮಾಡುವುದನ್ನು ತಪ್ಪಿಸುತ್ತದೆ. ಅಷ್ಟೇ ಅಲ್ಲದೇ ಇದು ನೆಗಡಿ, ಕೆಮ್ಮು, ಬಿಪಿ, ಲಿವರ್ ಸಮಸ್ಯೆಗಳನ್ನೂ ನಿವಾರಿಸುತ್ತದೆ.
ಹಾಗಾಗಿ ಹುಳಿಯಾದರೂ ಆಮ್ಲಾ ತಿನ್ನದೇ ಇರಬೇಡಿ. ಆರೋಗ್ಯಕ್ಕೆ ಒಳ್ಳೆಯದು. ಆಮ್ಲಾ ಕಾಯಿಗಳು ಎಲ್ಲಾ ಋತುಗಳಲ್ಲಿಯೂ ಹೊರಗೆ ಸಿಗುವುದಿಲ್ಲ. ಇವುಗಳನ್ನು ನಂತರ ಆನ್ಲೈನ್ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಖರೀದಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಮಾಡಬೇಕು ಎಂಬ ಚಿಂತೆ ಬಿಡಿ!