Select Your Language

Notifications

webdunia
webdunia
webdunia
webdunia

ಹಿಮ್ಮಡಿ ಬಿರುಕಿಗೆ ಬೆಸ್ಟ್ ಮನೆಮದ್ದು!

ಹಿಮ್ಮಡಿ ಬಿರುಕಿಗೆ ಬೆಸ್ಟ್ ಮನೆಮದ್ದು!
ಬೆಂಗಳೂರು , ಮಂಗಳವಾರ, 16 ನವೆಂಬರ್ 2021 (07:03 IST)
ಸಾಮಾನ್ಯವಾಗಿ ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಪಾದಗಳ ಹಿಮ್ಮಡಿ ಬಿರುಕಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
ಚಳಿಗಾಲದಲ್ಲಿ ಪಾದಗಳು ಒಡೆಯುವ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು. ಯಾಕೆಂದರೆ ಪಾದವು ಹೆಚ್ಚಾಗಿ ಹೊರಗಿನ ವಾತಾವರಣ, ಧೂಳು ಇತ್ಯಾದಿಗಳಿಗೆ ಒಗ್ಗಿಕೊಳ್ಳುವ ಕಾರಣದಿಂದಾಗಿ ಈ ಸಮಸ್ಯೆಯು ಬರುವುದು. ಅದರಲ್ಲೂ ಚಳಿಗಾಲದಲ್ಲಿ ವಾತಾವರಣವು ತುಂಬಾ ಶುಷ್ಕವಾಗಿರುವ ಕಾರಣ ಪಾದಗಳು ಸೀಳು ಬಿಡುವುದು ಸಾಮಾನ್ಯ.
ಹೀಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದೇಹದ ಪ್ರತಿಯೊಂದು ಅಂಗದ ಬಗ್ಗೆಯೂ ನಾವು ಗಮನ ನೀಡುತ್ತೇವೆ. ಆದರೆ ಪಾದಗಳನ್ನು ಮಾತ್ರ ಕಡೆಗಣಿಸುತ್ತೇವೆ. ಹೀಗೆ ಮಾಡಲೇಬಾರದು. ಗಾಳಿಯಲ್ಲಿ ಮೊಶ್ಚಿರೈಸರ್ ಕೊರತೆಯಿಂದಾಗಿ ಚರ್ಮದಲ್ಲಿನ ನೈಸರ್ಗಿಕ ಮೊಶ್ಚಿರೈಸರ್ ನ್ನು ತಾಪಮಾನವು ಹೀರಿಕೊಳ್ಳುವುದು ಮತ್ತು ಇದರಿಂದ ಚರ್ಮವು ಒಣ ಹಾಗೂ ಒರಟಾಗಿ ಕಾಣಿಸುವುದು.
ಇದನ್ನು ತಪ್ಪಿಸಲು ಪ್ರತಿಯೊಬ್ಬರು ಚರ್ಮ ಹಾಗೂ ಪಾದಗಳ ಆರೈಕೆಯನ್ನು ಸರಿಯಾಗಿ ಮಾಡಬೇಕು.
ಜೇನುತುಪ್ಪ
webdunia

1 ಕಪ್ ಜೇನು, ಬೆಚ್ಚಗಿನ ನೀರು ಎತ್ತಿಟ್ಟುಕೊಳ್ಳಿ. ಒಂದು ಕಪ್ ಜೇನುತುಪ್ಪವನ್ನು ಅರ್ಧ ಬಕೆಟ್ ಬೆಚ್ಚಗಿನ ನೀರಿಗೆ ಬೆರೆಸಿ. ನಿಮ್ಮ ಪಾದಗಳನ್ನು ಅದರಲ್ಲಿ ಸುಮಾರು 15-20 ನಿಮಿಷಗಳ ಕಾಲ ನೆನೆಸಿ. ನಂತರ ನಿಧಾನವಾಗಿ ಸ್ಕ್ರಬ್ ಮಾಡಿ. ನಿಯಮಿತವಾಗಿ ಇದನ್ನು ಅನುಸರಿಸಿದರೆ ಪಾದಗಳ ಬಿರುಕುಗಳು ಬೇಗ ಮುಚ್ಚುತ್ತವೆ.
ಎಳ್ಳು ಎಣ್ಣೆ
ಸುಮಾರು 4 ರಿಂದ 5 ಹನಿ ಎಳ್ಳು ಎಣ್ಣೆ ತೆಗೆದಿಟ್ಟುಕೊಳ್ಳಿ. ಬಿರುಕು ಬಿಟ್ಟ ಭಾಗಗಳಿಗೆ ಎಳ್ಳೆಣ್ಣೆಯನ್ನು ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ. ಮಲಗುವ ಮುನ್ನ ಪ್ರತಿದಿನ ಹೀಗೆ ಮಾಡಿದರೆ ಉತ್ತಮ ಪರಿಹಾರ ಸಿಗುವುದು.
ತೆಂಗಿನ ಎಣ್ಣೆ
webdunia

ಸುಮಾರು 2 ಚಮಚ ತೆಂಗಿನ ಎಣ್ಣೆ ಎತ್ತಿಟ್ಟುಕೊಳ್ಳಿ. ನಿಮ್ಮ ಕಾಲುಗಳಿಗೆ ಎಣ್ಣೆಯನ್ನು ಹಚ್ಚಿ. ಸಾಕ್ಸ್ ಧರಿಸಿ ಮಲಗಿ. ಬೆಳಿಗ್ಗೆ ಎಂದಿನಂತೆ ಸ್ನಾನ ಮಾಡಿ. ಮೃದುವಾದ ಪಾದಗಳನ್ನು ಪಡೆಯಲು ಇದನ್ನು ಕೆಲವು ದಿನಗಳವರೆಗೆ ಪುನರಾವರ್ತಿಸಿ.
 ನಿಂಬೆ ರಸ
webdunia

1 ಟೀಚಮಚ ವ್ಯಾಸಲಿನ್
•ನಾಲ್ಕರಿಂದ ಐದು ಹನಿಗಳಷ್ಟು ನಿಂಬೆಹಣ್ಣಿನ ರಸ
•ಉಗುರು ಬೆಚ್ಚಗಿನ ನೀರು ನಿಮ್ಮ ಕಾಲುಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸುಮಾರು 15 ರಿಂದ 20 ನಿಮಿಷಗಳ ಕಾಲ ನೆನೆಹಾಕಿ ನಂತರ ಒಣ ಬಟ್ಟೆಯಿಂದ ಕಾಲುಗಳನ್ನು ಒರೆಸಿಕೊಳ್ಳಿ. ನಿಂಬೆಹಣ್ಣಿನ ರಸ ಮತ್ತು ವ್ಯಾಸಲಿನ್ ಮಿಶ್ರಣ ಮಾಡಿ ಬಿರುಕುಬಿಟ್ಟ ಹಿಮ್ಮಡಿಯ ಭಾಗಕ್ಕೆ ಮತ್ತು ಪಾದಗಳ ಭಾಗಕ್ಕೆ ಅನ್ವಯಿಸಿ. ಕಾಲುಗಳಿಗೆ ಕಾಲು ಚೀಲವನ್ನು ಧರಿಸಿ ಇಡಿ ರಾತ್ರಿ ಹಾಗೆ ಮಲಗಿ ಕೊಳ್ಳುವುದರಿಂದ ಸಂಪೂರ್ಣವಾಗಿ ನಿಮ್ಮ ಚರ್ಮ ಇದನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ.
ಅಲೋವೆರಾ ಜೆಲ್
webdunia

ಅಲೋವೆರಾ ಜೆಲ್ ವಿಟಮಿನ್ ಎ, ಸಿ ಮತ್ತು ಇ ಅನ್ನು ಒಳಗೊಂಡಿದೆ. ಉತ್ಕರ್ಷಣ ನಿರೋಧಕವನ್ನು ಹೊಂದಿದ್ದು, ಚರ್ಮದ ಆರೋಗ್ಯವನ್ನು ಕಾಪಾಡುವುದು. ಇದರ ಆರೈಕೆಯಿಂದ ಪಾದಗಳ ಆರೋಗ್ಯವನ್ನು ಕಾಪಾಡಬಹುದು. ಅಲ್ಲದೆ ಗಾಯವನ್ನು ಗುಣಪಡಿಸುವ ಗುಣವನ್ನು ಒಳಗೊಂಡಿದೆ.
ಅಡುಗೆ ಸೋಡಾ
webdunia

•ಹೆಚ್ಚಿನವರು ಅಡುಗೆ ಸೋಡಾವನ್ನು ಬಳಸಿಕೊಳ್ಳುವರು. ಇದು ಅಡುಗೆಗೆ ಮಾತ್ರವಲ್ಲದೆ, ಇದರಿಂದ ಇತರ ಹಲವಾರು ಲಾಭಗಳು ಇವೆ. ಅರ್ಧ ಬಕೆಟ್ ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ.
•ನೀರಿನಲ್ಲಿ ಇದು ಸರಿಯಾಗಿ ಕರಗಲಿ. ಇದರ ಬಳಿಕ ಕಾಲುಗಳನ್ನು ಇದರಲ್ಲಿ ಅದ್ದಿಟ್ಟುಕೊಳ್ಳಿ ಮತ್ತು 10-15 ನಿಮಿಷ ಕಾಲ ಹಾಗೆ ಬಿಡಿ. ನೀರಿನಲ್ಲಿ ಅದ್ದಿಟ್ಟ ಬಳಿಕ ತುಂಬಾ ನಿಧಾನವಾಗಿ ಪ್ಯೂಮಿಕ್ ಕಲ್ಲಿನಿಂದ ಸ್ಕ್ರಬ್ ಮಾಡಿಕೊಳ್ಳಿ.
•ಇದರಿಂದ ಸತ್ತ ಚರ್ಮದ ಕೋಶಗಳನ್ನು ತೆಗೆಯಲು ನೆರವಾಗುವುದು. ಅಡುಗೆ ಸೋಡಾವು ಸತ್ತ ಚರ್ಮದ ಕೋಶಗಳನ್ನು ಕಿತ್ತು ಹಾಕುವ ಕೆಲಸ ಮಾಡುವುದು. ಇದರಲ್ಲಿ ಉರಿಯೂತ ಶಮನಕಾರಿ ಗುಣವಿದೆ ಮತ್ತು ಚರ್ಮವನ್ನು ಇದು ಮೃದುವಾಗಿಸುವುದು.


Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಹೆಚ್ಚಾಗಿ ಕಾಡುತ್ತಿದೆಯೇ?