Select Your Language

Notifications

webdunia
webdunia
webdunia
webdunia

ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ? ಟ್ರೈ ಮಾಡಿ

ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ? ಟ್ರೈ ಮಾಡಿ
ಬೆಂಗಳೂರು , ಬುಧವಾರ, 17 ನವೆಂಬರ್ 2021 (08:40 IST)
ಇಡೀ ದಿನ ಕಂಪ್ಯೂಟರ್, ಲ್ಯಾಪ್ಟಾಪ್ಗೆ ಅಂಟಿಕೊಂಡಿರುವುದರಿಂದ ಹೆಚ್ಚು ಸುಸ್ತು, ಆಯಾಸ, ಒತ್ತಡ ಜೊತೆಗೆ ಮಾನಸಿಕ ಕಿರಿಕಿರಿ ಉಂಟಾಗುತ್ತಿರಬಹುದು.
ಇಂತಹ ಸಮಯದಲ್ಲಿ ನೀವು ಪೌಷ್ಟಿಕ ಆಹಾರ ಸೇವಿಸುವುದು ಉತ್ತಮ. ಪೌಷ್ಟಿಕ ತಜ್ಞೆ ಸೋನಾಲಿ ಅವರು ಇನ್ಸ್ಟಾಗ್ರಾಮ್ನಲ್ಲಿ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ನಿಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು ಹೇಗೆ ಎಂಬುದರ ಬಗ್ಗೆ ಕೆಲವು ಮಾಹಿತಿಗಳು ಹೇಳಿದ್ದಾರೆ. ನೀವೂ ಸಹ ದಣಿವು, ಆಯಾಸವನ್ನು ಅನುಭವಿಸುತ್ತಿದ್ದಾರೆ.
ಫೈಬರ್
ಧಾನ್ಯಗಳು, ಬೀನ್ಸ್, ಕಡಲೆಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದು ಇನ್ಸುಲಿನ್ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಶಕ್ತಿಯ ಸ್ಥಿರ ಪೂರೈಕೆಯನ್ನು ನಿರ್ವಹಿಸಲು ಸಹಾಯಕವಾಗಿದೆ.
ಸೊಪ್ಪು, ತರಕಾರಿಗಳನ್ನು ಸೇವಿಸಿ
ವಿವಿಧ ರೀತಿಯ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಅವುಗಳ ಸೇವನೆಯಿಂದ ರಕ್ಷಣಾತ್ಮಕ ಫೈಟಿಕೆಮಿಕಲ್ಗಳು ಮತ್ತು ಅತ್ಯುತ್ತಮವಾದ ಚಯಾಪಚಯ ಕ್ರಿಯೆಗೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳು ಸಿಗುತ್ತವೆ.
ಆಹಾರ
ಕೆಲವು ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಉತ್ತಮ ಕೊಬ್ಬನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸಿ. ತಾಜಾ ಹಣ್ಣು ಮತ್ತು ಡ್ರೈಫ್ರೂಟ್ಸ್ಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
ಹೈಡ್ರೇಟ್
ನಿರ್ಜಲೀಕರಣವು ಆಯಾಸಕ್ಕೆ ಪ್ರಮುಖ ಕಾರಣವಾಗಿದೆ. ದಿನನಿತ್ಯದ ಚಟುವಟಿಕೆಯ ಜೊತೆಯಲ್ಲಿ ನೀರು ಅಥವಾ ಇತರ ಆರೋಗ್ಯಕರ ನೀರಿನಾಂಶ ಹೊಂದಿರುವ ಆಹಾರವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲಕ್ಕೆ ರಾಮಬಾಣ ಈ ಮೂಲಂಗಿ!