Select Your Language

Notifications

webdunia
webdunia
webdunia
webdunia

ಮುಟ್ಟಿನ ಸಮಯದಲ್ಲಿ ವರ್ಕೌಟ್ ಮಾಡಬಹುದೇ?

ಮುಟ್ಟಿನ ಸಮಯದಲ್ಲಿ ವರ್ಕೌಟ್ ಮಾಡಬಹುದೇ?
ಮೈಸೂರು , ಗುರುವಾರ, 18 ನವೆಂಬರ್ 2021 (09:28 IST)
ಮುಟ್ಟಿನ ಸಮಯದಲ್ಲಿ 30 ನಿಮಿಷಗಳ ಕಾಲ ವರ್ಕೌಟ್ ಮಾಡಬೇಕು. ಈ ರೀತಿ ಮಾಡುವುದರಿಂದ ಶಾರೀರಿಕ ನೋವಿನಿಂದ ಮುಕ್ತಿ ಸಿಗುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಇದು ಯಾವುದೇ ದೈಹಿಕ ಹಾನಿಯನ್ನುಂಟು ಮಾಡುವುದಿಲ್ಲ. ಮುಟ್ಟಿನ ಸಮಯದಲ್ಲಿ ಬೆನ್ನುನೋವಿನಿಂದ ನೀವು ತೊಂದರೆಗೊಳಗಾಗಿದ್ದರೆ, ರನ್ನಿಂಗ್ ಹಾಗೂ ವಾಕಿಂಗ್ ನಿಮಗೆ ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಮುಟ್ಟಿನ ದಿನಗಳು ಮಹಿಳೆಯರಿಗೆ ನೋವುಂಟುಮಾಡುತ್ತವೆ. ಹೀಗಾಗಿ ಮಹಿಳೆಯರು ಮುಟ್ಟಾದ ಮೊದಲ ಎರಡು ದಿನ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದಿನಗಳಲ್ಲಿ, ಮಹಿಳೆಯರಿಗೆ ಹೊಟ್ಟೆ, ಸೊಂಟ, ಕಾಲು, ತಲೆ ಇತ್ಯಾದಿಗಳಲ್ಲಿ ನೋವು ಇರುತ್ತದೆ. ಹೊಟ್ಟೆಯಲ್ಲಿ ವಿಚಿತ್ರವಾದ ನೋವಿನ ಜೊತೆಗೆ, ಮಹಿಳೆಯರಿಗೆ ತಲೆನೋವು, ಆಯಾಸ, ವಾಂತಿ, ವಾಕರಿಕೆ, ಆಯಾಸ, ಒತ್ತಡ, ಕಿರಿಕಿರಿ, ಇತ್ಯಾದಿ ಅನುಭವಿಸುತ್ತಿರುತ್ತಾರೆ. ಹೀಗಿರುವಾಗ ಫಿಟ್ನೆಸ್ ಕಡೆ ಗಮನ ಹರಿಸುವ ಮಹಿಳೆಯರಿಗೆ ಮುಟ್ಟಾದಾಗ ರನ್ನಿಂಗ್ ಮಾಡಬಹುದೇ ಎಂಬ ದೊಡ್ಡ ಪ್ರಶ್ನೆ ಕಾಡುತ್ತದೆ.
ಋತುಚಕ್ರದ ಸಮಯದಲ್ಲಿ ಮಹಿಳೆಯರು ದೈಹಿಕವಾಗಿ ಸಕ್ರಿಯರಾಗಿರಬೇಕು ಎಂದು ತಜ್ಞರು ಹೇಳಿದರೂ, ಕೆಲವು ಮಹಿಳೆಯರು ಈ ಅವಧಿಯಲ್ಲಿ ತೀವ್ರ ನೋವು ಅನುಭವಿಸುತ್ತಾರೆ ಮತ್ತು ಹಾಸಿಗೆಯಲ್ಲಿಯೇ ಅಥವಾ ಮನೆಯಲ್ಲಿಯೇ ಒಂದೇ ಕಡೆ ಇರಲು ಬಯಸುತ್ತಾರೆ. ಆದರೆ ಮಹಿಳೆಯರು ಪ್ರತಿ ದಿನವೂ ವಾಕಿಂಗ್, ರನ್ನಿಂಗ್, ವ್ಯಾಯಾಮಗಳನ್ನು ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದ್ದರಿಂದ ನೀವು ಪಿರಿಯಡ್ಸ್ ಅಥವಾ ಮುಟ್ಟಿನ ಸಮಯದಲ್ಲಿ ರನ್ನಿಂಗ್ ಮಾಡಬೇಕೇ ಅಥವಾ ಬೇಡವೇ ಎಂಬ ಗೊಂದಲ ಇದ್ದರೆ ಅದಕ್ಕೆ ಉತ್ತರ ಇಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಜೇನು ಏಕೆ ಅವಶ್ಯಕ?