ಬೆಂಗಳೂರು: ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಭಾರತ ವಿಶ್ವದಲ್ಲೇ ಉನ್ನತ ಸ್ಥಾನದಲ್ಲೇ ಇದೆ. ಆದರೆ ಅತ್ಯಾಚಾರ ಪ್ರಕರಣಗಳಲ್ಲಿ ಇತರರಿಗೆ ಪಾಠವಾಗುವಂತಹ ಶಿಕ್ಷೆ ಇನ್ನೂ ಸಿಕ್ಕಿಲ್ಲ.
ವಿಪರ್ಯಾಸವೆಂದರೆ ಮಹಿಳಾ ದಿನಾಚರಣೆಯೆಂದು ಭಾರತದಾದ್ಯಂತ ಎಲ್ಲರೂ ಆಚರಣೆ ಮಾಡುತ್ತಿದ್ದರೆ, ದೆಹಲಿಯ ನಿರ್ಭಯಾ ಅತ್ಯಾಚಾರ ಪೀಡಿತೆಯ ಕುಟುಂಬ ತಮ್ಮ ಮಗಳಿಗೆ ನ್ಯಾಯ ಸಿಗಲಿಲ್ಲ ಎಂದು ಕೊರಗುತ್ತಿದೆ.
ಜತೆಗೆ ಅದೆಷ್ಟೋ ನಿರ್ಭಯಾಳಂತಹ ಆತ್ಮಗಳು ನಮ್ಮ ಜೀವ ಕೊನೆಯಾಗಿದ್ದಕ್ಕೆ, ಜೀವನ ಕೊನೆಗಾಣಿಸಿದ ರಕ್ಕಸರಿಗೆ ಇನ್ನೂ ತಕ್ಕ ಶಾಸ್ತಿಯಾಗಿಲ್ಲ ಎಂದು ಕೊರಗುತ್ತಲೇ ಇದ್ದಾರೆ. ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ನೂರಾರು ದಾರಿಗಳಿವೆ. ಆದರೆ ಸಂತ್ರಸ್ತರಿಗೆ ಇದರಿಂದ ಅನ್ಯಾಯವಾಗುತ್ತಿದೆ. ಅತ್ಯಾಚಾರದಂತಹ ಹೇಯ ಕೃತ್ಯಗಳಲ್ಲಿ ಕಾನೂನುಗಳಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಕಠಿಣ ಕಾನೂನು ರೂಪಿಸಿದರೆ ಮಾತ್ರ ಮಹಿಳಾ ದಿನಾಚರಣೆ ಮಾಡುವುದಕ್ಕೆ ಅರ್ಥ ಸಿಗುವುದು.