Publish Date: Wed, 05 Sep 2018 (09:27 IST)
Updated Date: Wed, 05 Sep 2018 (09:29 IST)
ಬೆಂಗಳೂರು: ಕೆಲವು ಪರುಷರು ಮದುವೆಯಾಗದೇ ಏಕಾಂಗಿಯಾಗಿ ಜೀವನ ಕಳೆಯಲು ಬಯಸುತ್ತಾರೆ. ಆದರೆ ಅದಕ್ಕೆ ಕಾರಣವೇನೆಂದು ಅಧ್ಯಯನ ವರದಿಯೊಂದು ಶಾಕಿಂಗ್ ವಿವರ ಬಹಿರಂಗಪಡಿಸಿದೆ.
ಹುಡುಗಿ ಸಿಕ್ಕಿಲ್ಲ, ಸ್ವತಂತ್ರವಾಗಿರಬಹುದು ಎಂಬ ಕಾರಣಕ್ಕೆ ಪುರುಷರು ಏಕಾಂಗಿಯಾಗಿರಲು ಬಯಸುತ್ತಾರೆ ಎಂಬ ಸಾಮಾನ್ಯ ಕಾರಣಗಳನ್ನು ನೀವು ಊಹಿಸಬಹುದು. ಆದರೆ ಈ ಅಧ್ಯಯನ ಪ್ರಕಾರ ಪುರುಷರು ಸಿಂಗಲ್ ಆಗಿರಲು ಕಾರಣ ಬೇರೆಯದೇ ಇದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಪುರುಷರು ತಮ್ಮ ಏಕಾಂಗಿತನಕ್ಕೆ ಮುಖ್ಯ ಕಾರಣ ತಾವು ಸುಂದರವಾಗಿಲ್ಲ ಎಂದು ಕಾರಣ ನೀಡಿದ್ದಾರೆ. ಮಹಿಳೆಯರು ಮಾತ್ರ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎನ್ನುವುದು ತಪ್ಪು ಎನ್ನುವುದು ಈ ಸಮೀಕ್ಷೆಯಿಂದ ಖಚಿತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.