ಅರಸಿ ಸಾಕಾಗಿದೆ ನಿನ್ನ ಎನ್ನ ಮನದರಸಿಯೇ....

Webdunia
ಶನಿವಾರ, 9 ಫೆಬ್ರವರಿ 2019 (17:03 IST)
ಉಡುಪಿ: ಎಲ್ಲಿರುವೆ ಮನವ ಕಾಡುವ ರೂಪಸಿಯೇ…ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ ...


ಬಯಲುದಾರಿ ಸಿನಿಮಾನದ ಈ ಹಾಡು ಪ್ರತಿ ಪ್ರೇಮಿಗಳ ದಿನಕ್ಕೂ ಮೊದಲೆ ನನಗಾಗಿಯೇ ಸಿದ್ಧಗೊಂಡಿರಬಹುದ ಎಂದು ಎಣಿಸುವುದು ನನಗೆ ಮಾತ್ರಾನಾ ?



 
ಅದೆಷ್ಟೋ ವರುಷಗಳು ಸಂದವು ನನ್ನವಳ ಬರುವಿಕೆಗಾಗಿ ಕಾದು!!
ಇಂದಲ್ಲ ನಾಳೆ ಬಂದೆ ಬರುವಳು ಎನ್ನುವ ಆ ಹೊಂಗನಸಿನ ಗೋಪುರ ಇಂದು ಕೂಡ ಕಳೆಗಟ್ಟಿ‌ ನಿಂತಿದೆ.

 
ಗೆಳತಿ ಎಲ್ಲಿರುವೆ...
ಈ ಒಡಲಾಳದಲ್ಲಿ ನಿನಗೆಂದೆ ಅದೆಷ್ಟೋ ಅಕ್ಕರೆಯನ್ನು ಕೂಡಿಟ್ಟಿರುವೆ. ಮನಸ್ಸಿನ‌ ಬಯಕೆಗಳನ್ನೆಲ್ಲಾ ಬತ್ತದಂತೆ ನಿನಗಾಗಿಯೇ ಕಾಪಿಟ್ಟಿರುವೆ.ಯಾರೊಂದಿಗೂ ಹಂಚಿಕೊಳ್ಳಲಾಗದ ಭಾವನೆಗಳು ನಿನ್ನ ಬರುವಿಕೆಗೆ ಕಾತುರವಾಗಿವೆ.

 
ಗೆಳತಿ ನಿನಗೆ ಗೊತ್ತಾ..
ನನ್ನ ಮನದಾಳದ ಕಲ್ಪನೆಯ ಕೂಸು ನೀನು.ಅಲ್ಲಿ‌ ನಿನಗೊಂದು ಕಾಲ್ಪನಿಕ ರೂಪವಿದೆ, ನನ್ನದೆ  ಆದ ನಿನಗೊಂದು ಹೆಸರಿದೆ.ಮನಸ್ಸಿನ ತುಂಬಾ ನಿನ್ನದೆ ನಗುವಿನ ಕಲರವವಿದೆ.ನಿನ್ನ‌ ಸ್ಪರ್ಶದ ಕಚಗುಳಿಯ ಹಿತವಿದೆ.ಆ‌ ಮುದ್ದಾಟಕೂ ಮಿತಿಮೀರಿದ ಸರಸವಿದೆ.ಕೋಪ-ಸಿಟ್ಟಿನ ವಿರಸವಿದೆ.

 
ಗೆಳತಿ...
ನೀನು ಜಗದೇಕ ಸುಂದರಿಯಾಗಬೇಕೆಂದೆನಿಲ್ಲ.ನಮ್ಮ ಬಾಳಿನ ಸುಂದರ ನಾಳೆಗೆ ನೀನು ಸಾಕ್ಷಿಯಾಗಬೇಕು.
ನೀನು ಹಣ-ಆಸ್ತಿಯಲ್ಲಿ ಸಿರಿವಂತಳಾಗಬೇಕೆಂದೆನಿಲ್ಲ.ನಮ್ಮ ಬದುಕಿನ ಸುಖದ ಸಿರಿಯ ಪಾಲುದಾರಳಾಗಿರಬೇಕು.
ಸಿಡುಕಿ-ಹಟಮಾರಿಯಾಗಿದ್ದರು ಪರವಾಗಿಲ್ಲ.ಸಿಡುಕಿನಲ್ಲಿರುವ ಪ್ರೀತಿ, ಹಟದಲ್ಲಿರುವ ಮುಗ್ದತೆ ನನಗಷ್ಟೇ ಸೀಮಿತವಾಗಿರಬೇಕು.

 
ಇನ್ನು ಯಾಕೆ ಈ ಸತಾಯಿಸುವಿಕೆ ? ಕಾದಿರುವೆ ನಿನ್ನ ಬರುವಿಕೆಗಾಗಿ ಈ ಪ್ರೇಮಿಗಳ ದಿನ ನಮ್ಮ ಪ್ರೀತಿಯ ಮಿಲನವಾಗಿ ಹೊಸ ಪ್ರೇಮಕಾವ್ಯ ಜನ್ಮ ತಳೆಯಲಿ.

 
ಬರುವೆಯಲ್ಲ ಗೆಳತಿ..?

ಕಾಯುತ್ತಿರುವೆ
Samartha shetty yadthady

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಟ್ಟೆ ಸೇವನೆಯಿಂದ ನಿಮ್ಮ ದೇಹಕ್ಕೆ ಆಗುವ ಲಾಭದ ಬಗ್ಗೆ ಇಲ್ಲಿದೆ ಮಾಹಿತಿ

ಎಷ್ಟು ದಿನ ಫ್ರಿಡ್ಜ್ ನಲ್ಲಿ ಮೊಟ್ಟೆ ಇಟ್ಟುಕೊಂಡು ಸೇವನೆ ಮಾಡಬಹುದು

ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ಮುಂದಿನ ಸುದ್ದಿ
Show comments