Daily Horoscope

Select Your Language

Notifications

webdunia
webdunia
webdunia
webdunia

ಲವ್ ಮಾಡಿ ಮದ್ವೆ ಆಗಿದ್ದವಳ ಕಥೆ ಮುಗಿಸಿದ ದುಷ್ಕರ್ಮಿಗಳು!

ಯುವತಿ
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಯುವತಿಯ ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿ ಮೃತದೇಹವನ್ನು ದುಷ್ಕರ್ಮಿಗಳು ಹುಲಿಯೂರು ದುರ್ಗ ರಸ್ತೆ ಸಂತೆಮಾವತ್ತೂರು ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಕಮಲಾನಗರದ ಅರ್ಪಿತಾ (20) ಕೊಲೆಯಾದ ಯುವತಿ.  ಲೋಹಿತ್ ಎಂಬಾತನನ್ನು ಅರ್ಪಿತಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರಿಬ್ಬರ ಮದುವೆಗೆ ಎರಡು ಕುಟುಂಬಗಳಿಂದ ವಿರೋಧವಿತ್ತು.

ವಿರೋಧದ ನಡುವೆಯೂ ಅರ್ಪಿತಾ ಹಾಗೂ ಲೋಹಿತ್ ಮದುವೆ ಆಗಿದ್ದರು. ಪ್ರೀತಿಸಿ ಮದುವೆ ಆದ ಕೆಲವೇ ದಿನಗಳಲ್ಲಿ ಅರ್ಪಿತಾ ಹಾಗೂ ಲೋಹಿತ್ ಭಿನ್ನಾಭಿಪ್ರಾಯದಿಂದ ಬೇರೆ ಆಗಿದ್ದರು. ಅರ್ಪಿತಾ ಗೊರಗುಂಟೆಪಾಳ್ಯದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಪೆಟ್ರೋಲ್ ಬಂಕ್ ಡ್ರೆಸ್‌ನಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಮೇಲೆ ಕಾರು ಹಾಯಿಸಿದ್ದ ಆರೋಪಿ ಅಂದರ್