Webdunia - Bharat's app for daily news and videos

Install App

ವ್ಯಾಲೆಂಟೈನ್ ವಾರ: ಇಂದಿನ ದಿನ ಯಾವುದಕ್ಕೆ ವಿಶೇಷವಾಗಿದೆ.

ರಾಮಕೃಷ್ಣ ಪುರಾಣಿಕ
ಗುರುವಾರ, 8 ಫೆಬ್ರವರಿ 2018 (18:01 IST)
ಪ್ರೇಮಿಗಳ ದಿನಕ್ಕೆ ಕೇವಲ ಆರು ದಿನಗಳಷ್ಟೇ ಉಳಿದಿವೆ, ಆದರೆ ಈ ದಿನಕ್ಕಾಗಿ ಕಾಯುವ ಉತ್ಸಾಹ ಕಮ್ಮಿಯಾಗಿಲ್ಲ. ಈ ವಾರದ ಪ್ರತಿ ದಿನವೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಈ ಪ್ರೇಮಿಗಳ ದಿನದ ಮುಂಚಿನ ವಾರವು ಅಷ್ಟೇ ಸಮಾನವಾಗಿ ವಿಶೇಷವಾಗಿದೆ. ನಿನ್ನೆಯ ದಿನ ರೋಸ್ ದಿನವನ್ನಾಚರಿಸಿದ ಪ್ರೇಮಿಗಳು, ಇಂದು ಪ್ರಪೋಸ್ ದಿನವನ್ನು ಆಚರಿಸುತ್ತಿದ್ದಾರೆ. ಈ ವಾರದ ಇತರ ದಿನಗಳು ಏನು ವಿಶೇಷತೆಯನ್ನು ಹೊಂದಿವೆ ಎಂಬುದನ್ನು ಮುಂದೆ ಓದಿ.
ವ್ಯಾಲೆಂಟೈನ್ ವಾರದ ವಿಶೇಷ ದಿನಗಳು:
 
ರೋಸ್ ಡೇ: ವ್ಯಾಲೆಂಟೈನ್ ವಾರವು ಫೆಬ್ರುವರಿ 7 ರಿಂದ ರೋಸ್ ಡೇಯೊಂದಿಗೆ ಪ್ರಾರಂಭವಾಗುತ್ತದೆ. ಈ ದಿನ ಸುಂದರ ಗುಲಾಬಿ ಹೂವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಜನರು ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಕೆಂಪು ಬಣ್ಣದ ಹೂವನ್ನು ಪ್ರೇಮಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳಲು ವಿನಿಮಯ ಮಾಡಿಕೊಳ್ಳುತ್ತಾರೆ, ರೋಸ್ ಡೇ ಅನ್ನು ಸ್ನೇಹಿತರೂ ಸಹ ಆಚರಿಸುತ್ತಾರೆ, ಅವರು ಸಾಮಾನ್ಯವಾಗಿ ಈ ದಿನದಂದು ಪರಸ್ಪರ ಹಳದಿ ಗುಲಾಬಿಗಳನ್ನು ಹಂಚಿಕೊಳ್ಳುತ್ತಾರೆ.
 
ಪ್ರಪೋಸ್ ಡೇ: ಫೆಬ್ರುವರಿ 8 ಪ್ರಪೋಸ್ ಡೇ ಆಗಿದ್ದು, ನೀವು ಪ್ರೀತಿಸುವವವರ ಜೊತೆಗೆ ಸೂಕ್ತ ಸಮಯವನ್ನು ವ್ಯಯಿಸಿ ಅವರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ದಿನವಾಗಿದೆ. ಈ ದಿನ, ಅನೇಕರು ತಮ್ಮ ಪ್ರೀತಿಪಾತ್ರರಿಗೆ ವಿಶೇಷವಾದ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಅವರಿಗೆ ಅವರ ಪ್ರೀತಿಯನ್ನು ಪ್ರಸ್ತಾಪಿಸುತ್ತಾರೆ. ಅನೇಕ ಜನರು ಈ ದಿನವನ್ನು ಅವರು ಪ್ರೀತಿಸುವವರ ಜೊತೆಗೆ ಮದುವೆಯ ಪ್ರಸ್ತಾಪವನ್ನು ಮಾಡಲು ಬಳಸುತ್ತಾರೆ. ಪ್ರಪೋಸ್ ಮಾಡಲು ಇದಕ್ಕಿಂತ ಉತ್ತಮವಾದ ದಿನ ಬೇಕೇ?
 
ಚಾಕೊಲೇಟ್ ಡೇ: ಫೆಬ್ರುವರಿ 9 ಚಾಕೊಲೇಟ್ ದಿನವಾಗಿರುವುದರ ಕಾರಣ ಈ ದಿನ ಬಹಳಷ್ಟು ಜನರಿಗೆ ಮೆಚ್ಚಿನ ದಿನವಾಗಿದೆ. ಚಾಕೊಲೇಟ್ ಅನ್ನು ತಿನ್ನಿರಿ ಅಥವಾ ಇತರರಿಗೆ ಕೊಡುಗೆಯಾಗಿ ನೀಡಿ, ಆದರೆ ಈ ದಿನವನ್ನು ಕೇವಲ ಚಾಕೊಲೇಟ್‌ಗಳ ಮೂಲಕ ಸಂಭ್ರಮಿಸಿ. ವಿವಿಧ ಪ್ರಕಾರದ ಚಾಕೊಲೇಟ್ ಸಿಹಿಯ ಮೂಲಕ ಹೂಗುಚ್ಛಗಳನ್ನು ತಯಾರಿಸಿ ಅವುಗಳನ್ನು ಡೆಸರ್ಟ್‌ಗಳಲ್ಲಿ ಬಳಸುವ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ಅಚ್ಚರಿಗೊಳಿಸಿ, ಚಾಕೊಲೇಟ್ ಸಿಹಿಯೊಂದನ್ನು ಬಳಸಿಕೊಂಡು ಪ್ರೀತಿಪಾತ್ರರ ಮೇಲೆ ಪ್ರಭಾವ ಬೀರಲು ಚಾಕೊಲೇಟ್ ಡೇ ಸೂಕ್ತವಾದ ದಿನವಾಗಿದೆ.
 
ಟೆಡ್ಡಿ ಡೇ: ಮುದ್ದಾದ ಗೊಂಬೆಗಳನ್ನು ಯಾರು ಇಷ್ಟಪಡುವುದಿಲ್ಲ ಹೇಳಿ, ಅವುಗಳನ್ನು ಕೊಡುಗೆಯಾಗಿ ನೀಡಲು ಫೆಬ್ರುವರಿ 10 ಸೂಕ್ತ ದಿನ. ಈ ಮುದ್ದಾಗಿರುವ ಗೊಂಬೆಗಳನ್ನು ಪ್ರೀತಿಸುವವರಿಗಾಗಿಯೇ ಟೆಡ್ಡಿ ಡೇ ಅನ್ನು ಮಾಡಲಾಗಿದೆ. ಪ್ರೇಮಿಗಳ ದಿನದ ಕೆಲವೇ ದಿನಗಳ ಮೊದಲು, ಸುಲಭವಾಗಿ ಕೊಡುಗೆಯೊಂದನ್ನು ಆಯ್ಕೆ ಮಾಡಲು ಈ ದಿನ ಸಹಾಯ ಮಾಡುತ್ತದೆ. ಈ ವರ್ಷ ಎಷ್ಟು ಗೊಂಬೆಗಳನ್ನು ಖರೀದಿಸಲು ನೀವು ಯೋಚಿಸುತ್ತಿರುವಿರಿ?
 
ಪ್ರಾಮಿಸ್ ಡೇ: ಫೆಬ್ರುವರಿ 11 ಭರವಸೆಯ ದಿನವಾಗಿದೆ ಮತ್ತು ಪ್ರೇಮಿಗಳ ದಿನದ ಆಶಯಗಳು ಮತ್ತು ಸಂಬಂಧಗಳ ನಡುವಿನ ಪ್ರಮುಖ ಭರವಸೆಗಳನ್ನು ಈಡೇರಿಸಿಕೊಳ್ಳುವ ದಿನವಾಗಿದೆ. ಉತ್ತಮ ಸಂಬಂಧಕ್ಕಾಗಿ ಪರಸ್ಪರ ಪ್ರೀತಿ ಮತ್ತು ನಂಬಿಕೆಯ ಜೀವನದ ಕುರಿತು ಭರವಸೆಯನ್ನು ನೀಡಲು ಇದು ಜನರನ್ನು ಪ್ರೇರೇಪಿಸುತ್ತದೆ. ಪ್ರೀತಿಯ ನಡುವಿನ ಭರವಸೆಯು ಮುಂದೆ ಏನಾಗುತ್ತದೆ ಮತ್ತು ಯಾವ ಸಂದರ್ಭಗಳು ಎದುರಾಗುತ್ತವೆ ಎಂಬುದನ್ನು ಅವಲಂಭಿಸಿರುವುದಿಲ್ಲ.
 
ಹಗ್ ಡೇ: ಬಿಗಿಯಾದ ಅಪ್ಪುಗೆಗಿಂತ ಉತ್ತಮವಾಗಿರುವುದು ಏನು? ಫೆಬ್ರುವರಿ 12 ನಿಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಒಂದು ಅಪ್ಪುಗೆಯು ಎಲ್ಲ ವಿಷಯಗಳನ್ನೂ ಸರಿಯಾಗಿಸುವಂತೆ ಮತ್ತು ಜನರನ್ನು ಇಷ್ಟಪಡುವಂತೆ ಮತ್ತು ಕಾಳಜಿ ವಹಿಸುವಂತೆ ಮಾಡುತ್ತದೆ. ನಿಮ್ಮ ಪ್ರೀತಿಪಾತ್ರರನ್ನು ಬಿಗಿಯಾಗಿ ಅಪ್ಪಿಕೊಳ್ಳುವ ಮೂಲಕ ಅವರಿಗೆ ಹೆಚ್ಚಿನ ಪ್ರೀತಿಯನ್ನು ಹಂಚಿಕೊಳ್ಳುವ ದಿನವಾಗಿದೆ.
 
ಕಿಸ್ ಡೇ: ಪ್ರೀತಿಯ ಮಡಿಲಿನಲ್ಲಿರುವವರಿಗೆ ಫೆಬ್ರುವರಿ 13 ಅತ್ಯುತ್ತಮ ದಿನ, ಪ್ರೇಮಿಗಳ ದಿನದ ಹಿಂದಿನ ದಿನವೇ ಕಿಸ್ ಡೇ. ನಿಮ್ಮನ್ನು ಪ್ರೀತಿ ಮಾಡುವವರಿಗೆ ಈ ದಿನವನ್ನು ಹೆಚ್ಚು ವಿಶೇಷವನ್ನಾಸಿ ಮತ್ತು ಕಾಳಜಿವಹಿಸಿ. ಪ್ರೀತಿಯ ಸೂಕ್ಷ್ಮ ಅಭಿವ್ಯಕ್ತಿಯಾದ ಮುತ್ತನ್ನು ನೀಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಈ ದಿನವನ್ನು ಎಲ್ಲಾ ಪ್ರೇಮಿಗಳು ಪಾಲಿಸುತ್ತಾರೆ.
 
ಈ ಏಳು ದಿನಗಳಿಂದ ಕೂಡಿದ ವ್ಯಾಲೆಂಟೈನ್ ವಾರವು ಪ್ರೇಮಿಗಳ ನಡುವಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂಬುವುದೇ ನಮ್ಮ ಆಶಯ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments