Select Your Language

Notifications

webdunia
webdunia
webdunia
webdunia

ವ್ಯಾಲೆಂಟೈನ್ಸ್ ಡೇ - ಪ್ರೀತಿಯನ್ನು ಆಚರಿಸುವ ಒಂದು ದಿನ

ವ್ಯಾಲೆಂಟೈನ್ಸ್ ಡೇ - ಪ್ರೀತಿಯನ್ನು ಆಚರಿಸುವ ಒಂದು ದಿನ

ಅತಿಥಾ

ಬೆಂಗಳೂರು , ಗುರುವಾರ, 8 ಫೆಬ್ರವರಿ 2018 (16:24 IST)
ಫೆಬ್ರುವರಿ ತಿಂಗಳು ಎಲ್ಲ ಪ್ರೇಮಪಕ್ಷಿಗಳಿಗೂ ನೆಚ್ಚಿನ ತಿಂಗಳಾಗಿದೆ. ಅಲ್ಲದೆ ಫೆಬ್ರುವರಿ, ಪೇಮಿಗಳ ತಿಂಗಳಾಗಿದೆ. ಫೆಬ್ರುವರಿ ತಿಂಗಳಲ್ಲಿ ಪ್ರೇಮಿಗಳಿಗಾಗಿ ವ್ಯಾಲೆಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ ಎಂಬ ಹಬ್ಬಾನೇ ಇದೆ. ಫೆಬ್ರುವರಿ 7 ರಿಂದ 14 ರವರೆಗಿನ ದಿನಗಳು ಪ್ರೇಮಪಕ್ಷಿಗಳಿಗೆ ಮೀಸಲಾಗಿದೆ. ಗುಲಾಬಿ ದಿನ, ಪ್ರೇಮ ನಿವೇದನೆ ದಿನ, ಚಾಕಲೇಟ ದಿನ, ಟೆಡ್ಡಿಬೇರ್ ದಿನ, ಪ್ರೇಮಪ್ರಮಾಣ ದಿನ, ಅಪ್ಪುಗೆಯ ದಿನ, ಚುಂಬನ ದಿನ, ಪ್ರೇಮಿಗಳ ದಿನ ಹೀಗೆ 7 ದಿನಗಳವೆರೆಗೆ ಆಚರಿಸುತ್ತಾರೆ.
ವ್ಯಾಲೆಂಟೈನ್ಸ್ ಡೇ ಎಂದು ವ್ಯಾಪಕವಾಗಿ ಜನಪ್ರಿಯವಾಗಿರುವ ಸೇಂಟ್ ವ್ಯಾಲೆಂಟೈನ್ಸ್ ಡೇ, ಪ್ರೇಮಿಗಳ ನಡುವಿನ ಬಂಧ ಮತ್ತು ಪ್ರೇಮವನ್ನು ಸ್ಮರಿಸಿಕೊಳ್ಳಲು ಆಚರಿಸಲಾಗುತ್ತದೆ. ತಮ್ಮ ಪ್ರೀತಿಯ ಬಗ್ಗೆ ತಮ್ಮ ಪ್ರೀತಿಪಾತ್ರರಿಗೆ ತಿಳಿಸಲು ಒಂದು ಅದ್ಭುತವಾದ ಕ್ಷಣ ಎಂದು ಪರಿಗಣಿಸುವ ಯುವಕರು ವ್ಯಾಲೆಂಟೈನ್ಸ್ ಡೇ ಅನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ.
 
ವ್ಯಾಲೆಂಟೈನ್ಸ್ ಡೇ ಅನ್ನು ತಮ್ಮ ಪ್ರೀತಿಪಾತ್ರರಿಗೆ ವ್ಯಾಲೆಂಟೈನ್ಸ್ ಶುಭಾಶಯಗಳು, ಪುಷ್ಪಗುಚ್ಛ, ಪತ್ರಗಳು, ಗ್ರೀಟಿಂಗ್ ಕಾರ್ಡ್ ಮತ್ತು ಉಡುಗೊರೆಗಳನ್ನು ಕಳುಹಿಸುವ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ, ಪ್ರೇಮಿಗಳು ತಮ್ಮ ಸಂಗಾತಿಗೆ ತಮ್ಮ ಹೃದಯದ ಭಾವನೆಗಳನ್ನು ಹೇಳಲು ಫೆಬ್ರವರಿ 14, ಬುಧವಾರದಂದು ವ್ಯಾಲೆಂಟೈನ್ಸ್ ಡೇ ಆಚರಿಸಲಿದ್ದಾರೆ.
 
ವ್ಯಾಲೆಂಟೈನ್ಸ್ ಡೇ ನಿಜಕ್ಕೂ ಒಂದು ದೊಡ್ಡ ವಿಷಯವಾಗಿದೆ. ಈ ಸಂದರ್ಭವನ್ನು ತಮ್ಮ ಪ್ರೀತಿಯ ವಿಶೇಷ ಕ್ಷಣವನ್ನಾಗಿಸಲು ಜೋಡಿಗಳು ಅನನ್ಯ ಮತ್ತು ಆಕರ್ಷಕ ಉಡುಗೊರೆಯನ್ನು ಹುಡುಕುತ್ತಾರೆ. ಕೇವಲ ಯುವಕರು ಮಾತ್ರವಲ್ಲಿ ವಯಸ್ಸಾದ ದಂಪತಿಗಳು ಸಹ ವ್ಯಾಲೆಂಟೈನ್ಸ್ ಡೇ ಅನ್ನು ಅಷ್ಟೇ ವಿಶೇಷ ದಿನ ಎಂದು ಪರಿಗಣಿಸುತ್ತಾರೆ ಮತ್ತು ವ್ಯಾಲೆಂಟೈನ್ಸ್ ಡೇ ಶುಭಾಶಯಗಳನ್ನು ಮತ್ತು ವ್ಯಾಲೆಂಟೈನ್ಸ್ ಡೇ ಸಂದೇಶಗಳನ್ನು ಕಳುಹಿಸುವ ಮೂಲಕ ಅದನ್ನು ಸ್ಮರಣೀಯ ರೀತಿಯಲ್ಲಿ ಆಚರಿಸಲು ಯೋಜನೆಗಳನ್ನು ರೂಪಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಯ ಹುಡುಗಿಯನ್ನು ಹುಡುಕಿಕೊಳ್ಳಿ!