Select Your Language

Notifications

webdunia
webdunia
webdunia
webdunia

ಪ್ರೇಮ ನಿವೇದನೆಗೆ ಸಿದ್ಧರಾಗ್ತಾ ಇದ್ದೀರಾ ....!

ಪ್ರೇಮ ನಿವೇದನೆಗೆ ಸಿದ್ಧರಾಗ್ತಾ ಇದ್ದೀರಾ ....!

ಗುರುಮೂರ್ತಿ

ಬೆಂಗಳೂರು , ಗುರುವಾರ, 8 ಫೆಬ್ರವರಿ 2018 (20:31 IST)
ಪ್ರೀತಿಗೆ ಜನ್ಮ ನೀಡಿದ ಬೃಹ್ಮ ಭೂಮಿಗೆ ತಂದು ಎಸೆದಾ.....! ಹೌದು ಈ ಪ್ರೀತಿಯನ್ನು ಸೃಷ್ಟಿಸಿದ ದೇವರು ಅದು ಹೇಗೆ ಹುಟ್ಟುತ್ತದೆ ಎನ್ನುವ ಗುಟ್ಟನ್ನು ಮಾತ್ರ ತನ್ನ ಒಡಲೊಳಗೇ ಬಚ್ಚಿಟ್ಟು ಪ್ರೀತಿಯನ್ನು ಮಾತ್ರ ಬಿತ್ತರಿಸುತ್ತಾ ಹೋದ ಇಂದು ಅದೇ ಪ್ರೀತಿ ಜಗತ್ತಿನಾದ್ಯಂದ ಅದೆಷ್ಟೋ ಜೋಡಿ ಹೃದಯಗಳನ್ನು ಬೆಸೆಯುತ್ತಾ ತನ್ನ ಪ್ರಭಾವವನ್ನು ಬೀರುತ್ತಿದೆ.
ಪುಟ್ಟ ಹೃದಯದಲ್ಲಿ ಹುಟ್ಟುವ ಪ್ರೀತಿ ಎನ್ನೋ ಭಾವನೆ ಎಂತಹವರನ್ನಾದರೂ ಸೆಳೆಯುವ ಶಕ್ತಿಯನ್ನು ಹೊಂದಿದೆ. ಅಂತಹ ಪ್ರೀತಿಗೆ ಸೋತೆ ಅದೆಷ್ಟೋ ಮನಸುಗಳು ಒಂದಾಗಿವೆ, ಒಂದಾಗುತ್ತಿವೆ. ಈ ಪ್ರೀತಿ ಎನ್ನೋ ಮಾಯೆ ಯಾರನ್ನು ಬಿಟ್ಟಿಲ್ಲ. ಕೆಲವು ಪ್ರೀತಿ ಕಣ್ಣಲ್ಲಿ ಶುರುವಾಗಿ ನಗುವಲ್ಲಿ ಒಂದಾದರೆ ಇನ್ನು ಕೆಲವು ಪ್ರೀತಿ ನಗುವಲ್ಲಿ ಶುರುವಾಗಿ ಕಣ್ಣಲ್ಲಿ ಒಂದಾಗುತ್ತದೆ. ಅದರಲ್ಲೂ ಪ್ರೀತಿಯಲ್ಲಿ ಪರಿತಪಿಸುವ ಹೃದಯಗಳು ಪ್ರೇಮಿಗಳ ದಿನ ಬಂತೆಂದರೆ ಸಾಕು ಹೇಗೆ ನಿವೇದನೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿ ಬಿದ್ದು ನರಳಾಡುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಹಾಗಾಗಿಯೇ ಅಂತಹ ಪ್ರೀತಿಯ ಹೃದಯಗಳಿಗೆ ಮನದಾಸೆಯನ್ನು ಹೇಗೆ ವ್ಯಕ್ತಪಡಿಸಿದರೆ ಚೆನ್ನ ಎಂಬುದಕ್ಕೆ ಸಪ್ತ ಸೂತ್ರಗಳು ನಿಮಗಾಗಿ
 
ಭಾವನೆಯನ್ನು ವ್ಯಕ್ತಪಡಿಸುವಾಗ ಧೈರ್ಯವಾಗಿರಿ
webdunia
ನಿಮ್ಮ ಪ್ರೀತಿಯನ್ನು ನೀವು ವ್ಯಕ್ತಪಡಿಸುವಾಗ ಯಾವುದೇ ಪೂರ್ವ ಯೋಜಿತವಾಗಿ ತಯಾರಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ನಿಮ್ಮ ಮನದಲ್ಲಿ ಏನಿದೆ ಎಂಬುದನ್ನು ನಿಖರವಾಗಿ ನಿಮ್ಮ ಸಂಗಾತಿಗೆ ತಿಳಿಸಿ. ಅಷ್ಟೇ ಅಲ್ಲ, ನಿಮ್ಮ ಭಾವನೆಯನ್ನು ಹೊರಹಾಕುವಾಗ ನಿಮ್ಮ ಮುಖದಲ್ಲಿ ನಗುವಿರಲಿ ಯಾವುದೇ ಕಾರಣಕ್ಕೂ ನೀವು ಹೇಳುವ ಮಾತುಗಳು ಕೃತಕ ಎಂಬ ಭಾವನೆ ಅವರಿಗೆ ಬಾರದಂತೆ ಗಮನಹರಿಸಿ. ಮುಕ್ತವಾಗಿ ನಿಮ್ಮ ಮನದ ಆಸೆಯನ್ನು ಹಂಚಿಕೊಳ್ಳಿ. ಅತಿಯಾದ ಹೊಗಳುವಿಕೆ ಬೇಡ ನಿಮ್ಮ ಮಾತುಗಳಲ್ಲಿ ನೈಜತೆ ಇರಲಿ. ಅಲ್ಲದೆ, ಕಣ್ಮುಗಳು ಮನಸಿನ ಭಾವನೆಯನ್ನು ಬೇಗನೆ ಹೃದಯಕ್ಕೆ ತಲುಪಿಸುತ್ತವೆ ಹಾಗಾಗಿ ಸಾಧ್ಯವಾದಷ್ಟು ನಿಮ್ಮ ಪ್ರೀತಿಯನ್ನು ಕಣ್ಣುಗಳಲ್ಲಿ ವ್ಯಕ್ತಪಡಿಸಿ.
 
 
ನಿಮ್ಮ ಸಂಗಾತಿಗೆ ಇಷ್ಟವಾಗುವ ಉಡುಗೊರೆ
webdunia
ನಿಮ್ಮ ಸಂಗಾತಿಗೆ ಇಷ್ಟವಾಗುವಂತಹ ಉಡುಗೊರೆಯನ್ನು ಕೊಳ್ಳಿರಿ ಹಾಗಂತ ಅತಿ ದುಬಾರಿಯಾಗಿರುವ ವಸ್ತುಗಳನ್ನು ಖರೀದಿಸಿ ಎಂದು ಹೇಳುತ್ತಿಲ್ಲ. ನಿಜವಾದ ಪ್ರೀತಿ ಯಾವುದನ್ನಾದರೂ ಸ್ವೀಕರಿಸುತ್ತದೆ, ಆದರೆ ನೀವು ಖರೀದಿಸುವ ವಸ್ತು ಅರ್ಥಗರ್ಭಿತವಾಗಿರಲಿ. ಅದು ನಿಮ್ಮ ಪ್ರೀತಿಯ ಮೊದಲ ಕಾಣಿಕೆ ಆಗಿರುವುದರಿಂದ ಸ್ವಲ್ಪ ಉತ್ತಮವಾಗಿದ್ದರೆ ಚೆನ್ನ.
 
 
ಹೂ ಇದ್ದರೆ ಚೆನ್ನ
webdunia
ನೀವು ಪ್ರೀತಿಯನ್ನು ವ್ಯಕ್ತಪಡಿಸುವಾಗ ಒಂದು ಹೂ ಅಥವಾ ಹೂಗುಚ್ಛ ಇದ್ದಲ್ಲಿ ಇದು ನಿಮ್ಮಬ್ಬರ ನಡುವೆ ಆಹ್ಲಾದಕರವಾದ ವಾತಾವರಣವನ್ನು ನಿರ್ಮಿಸಬಲ್ಲದು. ಅಲ್ಲದೇ ಹೂ ಎಂತಹವರನ್ನಾದರೂ ಆಕರ್ಷಿಸುವ ಗುಣವನ್ನು ಹೊಂದಿರುವುದರಿಂದ ಅದನ್ನು ಒಯ್ಯುವುದನ್ನು ಮರೆಯಬೇಡಿ ಅದರಲ್ಲೂ ಗುಲಾಬಿ ಹೂ ಪ್ರೀತಿಯ ಸಂಕೇತವೆಂದೇ ಹೇಳಬಹುದು.
 
 
ಅತಿಯಾದ ಅಲಂಕಾರ ಬೇಡ
webdunia
ಪ್ರೇಮಿಗಳ ದಿನದಂದು ನಿಮ್ಮ ಉಡುಗೆ ತೊಡುಗೆ ಸರಳವಾಗಿರಲಿ ಅತಿಯಾದ ಅಲಂಕಾರ ಬೇಡ. ಹೆಣ್ಣುಮಕ್ಕಳಾಗಿದ್ದಲ್ಲಿ ಅತಿಯಾದ ಮೇಕಪ್ ಬೇಡವೇ ಬೇಡ, ಅಷ್ಟೇ ಅಲ್ಲ ದೇಸಿ ಲೂಕ್ ಹುಡುಗರನ್ನು ಬೇಗ ಆಕರ್ಷಿಸುವುದರಿಂದ ಹೆಚ್ಚಾಗಿ ಆ ರೀತಿಯ ಬಟ್ಟೆಗಳನ್ನು ತೊಡುವುದು ಸೂಕ್ತ. ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳಿ. ಆದಷ್ಟು ತಿಳಿಬಣ್ಣದ ಬಟ್ಟೆಗಳನ್ನು ತೊಡುವುದು ಸೂಕ್ತ. ಒಂದು ವೇಳೆ ನೀವು ಪರ್ಫ್ಯೂಮ್ ಬಳಸುತ್ತಿದ್ದಲ್ಲಿ ಗಾಢವಾದ ಸುಹಾಸನೆಯ ಪರ್ಫ್ಯೂಮ್ ಬೇಡ. ಅಲ್ಲದೇ, ಯಾವುದೇ ವಿಶೇಷವಾದ ಅಲಂಕಾರಗಳು ಬೇಡವೇ ಬೇಡ ಏಕೆಂದರೆ ಪ್ರೀತಿ ಬಯಸುವುದು ನಿಮ್ಮ ಸುಂದರತೆಯನ್ನಲ್ಲಾ ಎನ್ನುವುದು ನಿಮ್ಮ ಮನದಲ್ಲಿರಲಿ.
 
 
ಮಧುರ ಕ್ಷಣಕ್ಕೆ ಚಾಕೊಲೇಟ್
webdunia
ಯಾವುದೇ ಒಳ್ಳೆಯ ಕಾರ್ಯಕ್ಕೆ ಮೊದಲು ಸಿಹಿ ಕೊಡುವುದು ವಾಡಿಕೆ ಅದಕ್ಕಾಗಿ ನಿಮ್ಮ ಪ್ರೀತಿ ಪ್ರಾತ್ರರೊಡನೆ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳುವಾಗ ಚಾಕೊಲೇಟ್ ಇದ್ದರೆ ಒಳ್ಳೆಯದು ಅದು ನಿಮ್ಮ ಕ್ಷಣವನ್ನು ಉತ್ತಮವಾಗಿಸಬಹುದು.
 
 
ಮುದ್ದಾದ ಪ್ರೇಮಪತ್ರ
webdunia
ಇಂದಿನ ಕಾಲದಲ್ಲಿ ವಾಟ್ಸ್‌ಆಪ್, ಟ್ವಿಟರ್, ಫೇಸ್‌ಬುಕ್ ಹೀಗೆ ನಾನಾ ತರಹದ ಅಪ್ಲಿಕೇಶನ್‌ಗಳು ಬಂದಿದ್ದರೂ ಅನಾದಿ ಕಾಲದಿಂದ ಪ್ರಸಿದ್ಧಿಯನ್ನು ಪಡೆದಿರುವುದು ಮಾತ್ರ ಈ ಪ್ರೇಮಪತ್ರಗಳೇ. ಹೌದು ಹಿಂದಿನ ಕಾಲದ ಅದೆಷ್ಟೋ ಪ್ರೇಮಪತ್ರಗಳು ಇಂದಿಗೂ ತಮ್ಮ ಪ್ರೀತಿಯನ್ನು ನೆನಪಿನ ಬುಟ್ಟಿಯಲ್ಲಿ ಸುರಕ್ಷಿತವಾಗಿ ಇರಿಸಿವೆ ಎಂದರೆ ಅದರ ಶಕ್ತಿ ಎಷ್ಟಿರಬಹುದು...! ಎಂಬುದನ್ನು ನೀವೇ ಊಹಿಸಿ. ಮುದ್ದಾದ ಬರವಣಿಗೆಯಲ್ಲಿ ಗೀಚುವ ಮೊದಲ ಬರವಣಿಗೆಯೇ ನಿಜವಾದ ಪ್ರೇಮಪತ್ರ. ಇದು ಎಷ್ಟೇ ಪುರಾತನವಾದ ಮಾಧ್ಯಮವಾದರೂ ಅದಕ್ಕೆ ಮನಸೋಲದವರೇ ಇಲ್ಲ. ಬರವಣಿಗೆಯಲ್ಲಿ ಇರುವ ತಾಕತ್ತೇ ಅಂತಹದು. ಅದಕ್ಕಾಗಿ ನಿಮ್ಮ ಪ್ರೀತಿ ವ್ಯಕ್ತಪಡಿಸುವ ಮುನ್ನ ನಿಮ್ಮ ಪ್ರೇಮದ ಕುರಿತು ಚಿಕ್ಕ ಪತ್ರ ನಿಮ್ಮ ಬಳಿ ಇರಲಿ.
 
ಸೂಕ್ತವಾದ ಸ್ಥಳ
webdunia
ಪ್ರೀತಿಯನ್ನು ಹೇಳಿಕೊಳ್ಳಲು ಸೂಕ್ತವಾದ ಸ್ಥಳವನ್ನು ಆರಿಸಿಕೊಳ್ಳಿ ಏಕೆಂದರೆ ನೀವು ಮೊದಲ ಬಾರಿ ಪ್ರೇಮನಿವೇದನೆ ಮಾಡುತ್ತಿರುವುದರಿಂದ ಅದು ನಿಮ್ಮ ಜೀವನದ ಅದ್ಭುತ ಕ್ಷಣವಾಗಬಹುದು. ಹಾಗಾಗಿ ಆ ದಿನವನ್ನು ವಿಶೇಷವಾಗಿಸಲು ಸಮುದ್ರದ ತೀರ ಇಲ್ಲವೇ ಸುಂದರವಾದ ಪಾರ್ಕ್, ಹೀಗೆ ಸಾಧ್ಯವಾದಷ್ಟು ಏಕಾಂತವಾದ ಪ್ರದೇಶವನ್ನು ಆಯ್ದುಕೊಳ್ಳಿ.
 
ಇದೆಲ್ಲದಕ್ಕೂ ಮೀರಿ ಒಂದು ಮಾತು, ಮೊದಲು ನಿಮ್ಮ ಪ್ರೀತಿಯಲ್ಲಿ ಯಾವುದೇ ದುರುದ್ದೇಶವಾಗಲಿ, ಹುರುಳಾಗಲಿ ಬೇಡವೇ ಬೇಡ ಏಕೆಂದರೆ ಪ್ರತಿ ಪ್ರೇಮಿಯು ಸಾವಿರ ಕನಸುಗಳನ್ನು ಹೆಣೆದಿರುತ್ತಾರೆ ಅವರ ಕನಸುಗಳು ಮುಗ್ಧವಾಗಿರಬಹುದು. ಅಲ್ಲದೆ ನೀವು ಯಾರ ಜೀವನದಲ್ಲಿ ಪ್ರವೇಶಿಸಲು ಬಯಸುತ್ತಿರೋ ಸಾವಿರ ಸಲ ಚಿಂತಿಸಿ ನಿರ್ಧಾರವನ್ನು ಕೈಗೊಳ್ಳಿ. ನಿಜವಾದ ಪ್ರೀತಿಗೆ ಎಂದೂ ಸೋಲಾಗದು. ನಿಮ್ಮ ಪ್ರೇಮ ನಿವೇದನೆ ಯಶಸ್ವಿಯಾಗಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಯಾವ ಬಣ್ಣದ ಗುಲಾಬಿ ಕೊಟ್ಟರೆ ಚೆನ್ನ....!