Webdunia - Bharat's app for daily news and videos

Install App

ಪ್ರೇಮಿಗಳಿಲ್ಲದ ಒಂಟಿ ಪಿಶಾಚಿ ನಾನು.. ಹೇಗೆ ಕಳೆಯಲಿ ಪ್ರೇಮಿಗಳ ದಿನವಾ..?!

Webdunia
ಗುರುವಾರ, 8 ಫೆಬ್ರವರಿ 2018 (15:39 IST)
ಬೆಂಗಳೂರು: ಕೆಂಬಣ್ಣದ ಗುಲಾಬಿ ಹಿಡಿದು ಎಷ್ಟು ಸುತ್ತಾಡಿದರೂ ಕೈಗೆ ಕೈ ಜೋಡಿಸಲು ಒಂದೂ ಬೆರಳುಗಳು ಸಿಗುತ್ತಿಲ್ಲ. ಹೇಗೆ ಕಳೆಯಲಿ ಮಧುರ ದಿನವ ಏಕಾಂಗಿಯಾಗಿ..? ಒಂಟಿಯಾಗಿಯೂ ವ್ಯಾಲೆಂಟೆನ್ಸ್ ದಿನ ಕಳೆಯೋದು ಹೇಗೆ? ಇಲ್ಲಿದೆ ಐಡಿಯಾ..
 

ಸಿಂಗಲ್ ಎಂಬ ಬೇಸರ ಬೇಡ!
ಪೊಸಿಟಿವ್ ಥಿಂಕಿಂಗ್ ಒಳ್ಳೆಯದೇ. ಸಿಂಗಲ್ ಆಗಿದ್ದರೂ ಒಂದು ಲೆಕ್ಕದಲ್ಲಿ ಒಳ್ಳೆಯದೇ. ಪ್ರೇಮಿಗಾಗಿ ಅವರಿಗೆ ಇಷ್ಟವಾಗುವ ಡ್ರೆಸ್, ಅವರಿಗೆ ಇಷ್ಟವಾಗುವ ರೀತಿಯೇ ಇರಬೇಕೆಂಬ ನಿಯಮವಿಲ್ಲ! ನಿಮಗಿಷ್ಟ ಬಂದ ರೀತಿ ಸೆಲೆಬ್ರೇಟ್ ಮಾಡಿಕೊಳ್ಳುವ ಆಯ್ಕೆ ನಿಮಗಿರುತ್ತದೆ.

ಡೇಟಿಂಗ್ ಆಪ್ ಬಳಸಿ
ವ್ಯಾಲೆಂಟೈನ್ ಇಲ್ಲ ಎಂಬ ಬೇಸರವಿದ್ದರೆ ಡೇಟಿಂಗ್ ಆಪ್ ಗಳ ಮೊರೆ ಹೋಗಿ. ಅಲ್ಲಿ ನಿಮಗೆ ಕಂಪನಿ ಕೊಡಲು ನಿಮ್ಮ ಹಾಗೇ ಸಿಂಗಲ್ ಆಗಿರುವ ಎಷ್ಟೋ ಜನ ಸಿಗ್ತಾರೆ. ಸಮಾನ ದುಃಖಿಗಳ ಜತೆ ಫನ್ ಮಾಡಿ!

ಹಣ ಉಳಿತಾಯ
ಜತೆಗಾರರಿದ್ದರೆ ತಾನೇ ಗಿಫ್ಟ್ ಕೊಡುವ ಜರೂರತ್ತು. ಪ್ರೇಮಿಯೇ ಇಲ್ಲದಿದ್ದ ಮೇಲೆ ಗಿಫ್ಟ್ ಖರೀದಿಸುವ ಹಣ ಉಳಿತಾಯ. ಆ ದುಡ್ಡಲ್ಲಿ ಒಳ್ಳೆ ರೆಸ್ಟೋರೆಂಟ್ ಗೆ ಹೋಗಿ ಚೆನ್ನಾಗಿ ತಿಂದು ಬನ್ನಿ.

ಸಿಂಗಲ್ಸ್ ಪಾರ್ಟಿ ಕೊಡಿ
ನಿಮ್ಮ ಹಾಗೆ ಪ್ರೀತಿಗೆ ಬೀಳದೇ ಇರುವ ಸ್ನೇಹಿತರನ್ನು ಪತ್ತೆ ಮಾಡಿ ಅವರಿಗೆಲ್ಲಾ ಪಾರ್ಟಿ ಕೊಡಿ. ಸಿಂಗಲ್ಸ್ ಪಾರ್ಟಿ ಕೊಟ್ಟು ಮಜಾ ಮಾಡಿ.

ಸಿನಿಮಾ
ಸ್ನೇಹಿತರ ಜತೆಗೆ ಅಥವಾ ಅವರೂ ಸಿಗದಿದ್ದರೆ ಏಕಾಂಗಿಯಾಗಿ ಕುಳಿತು ನಿಮಗಿಷ್ಟ ಬಂದ ಸಿನಿಮಾಗಳನ್ನೆಲ್ಲಾ ಒಂದಾದ ಮೇಲೆ ಒಂದರಂತೆ ನೋಡ್ತಾ ಇರಿ.

ಹವ್ಯಾಸಗಳು
ನಿಮ್ಮ ಇಷ್ಟದ ಹವ್ಯಾಸ ಅಂತ ಇದ್ದೇ ಇರುತ್ತಲ್ಲಾ? ಪುಸ್ತಕ ಓದೋದು, ಏನಾದರೂ ಬರೆಯುವುದು, ಜಿಮ್ ಮಾಡೋದು, ಆಡೋದು ಹೀಗೇ ಏನಾದ್ರೂ ಮಾಡ್ತಾ ಇರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments