Publish Date: Fri, 02 Feb 2018 (17:08 IST)
Updated Date: Fri, 02 Feb 2018 (17:11 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಲವ್ ಸ್ಟೋರಿ ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ ಡರ್ಬನ್ ಏಕದಿನ ಪಂದ್ಯದಲ್ಲಿ ಶತಕ ಹೊಡೆದಿದ್ದು ನೋಡಿ ಅನುಷ್ಕಾ ಲವ್ ಹೆಚ್ಚಾಗಿದೆ!
ಟೆಸ್ಟ್ ಪಂದ್ಯದಲ್ಲಿ ಶತಕ ಹೊಡೆದ ಮೇಲೆ ಕೊಹ್ಲಿ ಮದುವೆಯ ಉಂಗುರ ತೋರಿಸಿ ಮುತ್ತಿಕ್ಕಿ ಮೈದಾನದಲ್ಲೇ ತಮ್ಮ ಪ್ರೇಮ ವ್ಯಕ್ತಡಿಸಿದ್ದರು. ಇದೀಗ ಅನುಷ್ಕಾ ಸರದಿ. ಶತಕ ಗಳಿಸಿದ ಕೊಹ್ಲಿ ವಿಶಿಷ್ಟವಾಗಿ ಇನ್ ಸ್ಟಾಗ್ರಾಂ ಪುಟದಲ್ಲಿ ಅನುಷ್ಕಾ ಪ್ರೀತಿ ತೋರಿಸಿದ್ದಾರೆ.
ವಿರಾಟ್ ಕೊಹ್ಲಿ ಶತಕದ ಕ್ಷಣಗಳ ಸರಣಿ ಫೋಟೋಗಳನ್ನು ಪ್ರಕಟಿಸಿದ ಅನುಷ್ಕಾ ಅದರ ಮೇಲೆ ‘ವಾಟ್ ಎ ಗೈ’ ಎಂದು ಪರಿಗಣಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ 100 ಎಂದು ಬರೆದು ಲವ್ ಸಂಕೇತವನ್ನೂ ಬರೆದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳೂ ಖುಷ್ ಆಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ