Publish Date: Sat, 08 Sep 2018 (09:38 IST)
Updated Date: Sat, 08 Sep 2018 (09:40 IST)
ಬೆಂಗಳೂರು: ನಿಮ್ಮ ಬಾಯ್ ಫ್ರೆಂಡ್ ಸುಳ್ಳು ಹೇಳ್ತಿದ್ದಾನೆ ಎಂಬ ಅನುಮಾನವಿದೆಯೇ? ಹಾಗಿದ್ದರೆ ಅದನ್ನು ಆತನ ಸ್ವಭಾವದಿಂದಲೇ ಪತ್ತೆ ಮಾಡಬಹುದು.
ಅತಿಯಾದ ಸಮರ್ಥನೆ
ನೀನು ಮಾಡಿದ್ದು ಸರಿಯಲ್ಲ ಎಂದಾಗ ಅಥವಾ ನೀನು ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದರೆ ಅತಿಯಾಗಿ ಸಮರ್ಥಿಸಿಕೊಳ್ಳುತ್ತಾನೆಂದರೆ ಸಂಶಯಪಡಲೇಬೇಕು!
ತಡವರಿಸುವುದು
ಕೆಲವೊಂದು ಸಣ್ಣ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸುವುದು, ನೆಪ ಹೇಳುವುದು ಮಾಡುತ್ತಿದ್ದರೆ ಅಂತಹವರನ್ನು ನಂಬಲಾಗದು.
ಒಂದೊಂದು ಸಲ ಒಂದೊಂದು ರೀತಿ
ಕೆಲವರು ಹೇಳುವುದಕ್ಕೂ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಬಾಯಲ್ಲಿ ಆಚಾರ ಮಾತನಾಡಿ ಅಸಂಬದ್ಧ ಮಾಡುವವರನ್ನು ನಂಬಲೇಬೇಡಿ
ವಿಷಯ ಮರೆಸುವುದು
ಏನೋ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವಿಷಯ ಮರೆಸುವುದು, ಇನ್ನೇನೋ ಅನಗತ್ಯ ವಿಚಾರಕ್ಕೆ ವಿಷಯಾಂತರ ಮಾಡುವವರು ಸುಳ್ಳುಬುರುಕರು ಎನ್ನುವುದರಲ್ಲಿ ಸಂಶಯ ಬೇಡ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.