Webdunia - Bharat's app for daily news and videos

Install App

ತಮಿಳುನಾಡಿನೊಂದಿಗೆ ಹಿಂದಿಯಲ್ಲಿ ಸಂವಹನ ಏಕೆ? : ಹೈಕೋರ್ಟ್

Webdunia
ಶುಕ್ರವಾರ, 10 ಸೆಪ್ಟಂಬರ್ 2021 (09:13 IST)
ಚೆನ್ನೈ, ಸೆ 10 : ಹಿಂದಿಯನ್ನು ಅಧಿಕೃತ ಸಂವಹನ ಭಾಷೆಯಾಗಿ ಕೇಂದ್ರವು ತಮಿಳುನಾಡಿನೊಂದಿಗೆ ಬಳಸಲಾಗದು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಿಂದಿಯನ್ನು ಅಧಿಕೃತ ಭಾಷೆಯಾಗಿ ಅಳವಡಿಸಿಕೊಳ್ಳದಿರುವ ರಾಜ್ಯಗಳೊಂದಿಗೆ ಇಂಗ್ಲಿಷ್ನಲ್ಲಿ ಸಂವಹನ ನಡೆಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಮಧುರೈ ಲೋಕಸಭಾ ಕ್ಷೇತ್ರದ ಸಂಸದ ಸು ವೆಂಕಟೇಸನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಹೀಗೆ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಎನ್ ಕಿರುಬಾಕರನ್ (ಪ್ರಸ್ತುತ ನಿವೃತ್ತರು) ಮತ್ತು ಎಂ ದುರೈಸ್ವಾಮಿ ಅವರು, ಅಧಿಕೃತ ಭಾಷೆಗಳ ಕಾಯಿದೆ 1963 ಹಾಗೂ ಅಧಿಕೃತ ಭಾಷೆಗಳ ನಿಯಮಗಳ 1976ರ ಅನ್ವಯ ಕೇಂದ್ರವು ಮೇಲಿನಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೆಂಕಟೇಸನ್ ಅವರು ತಮ್ಮ ಅರ್ಜಿಯಲ್ಲಿ, ತಾವು ಕೇಂದ್ರ ಸರ್ಕಾರಕ್ಕೆ ಇಂಗ್ಲಿಷ್ನಲ್ಲಿ ಮನವಿಯೊಂದನ್ನು ಸಲ್ಲಿಸಿದ್ದು ಅದಕ್ಕೆ ಉತ್ತರವನ್ನು ಕೇಂದ್ರ ಸರ್ಕಾರವು ಹಿಂದಿಯಲ್ಲಿ ನೀಡಿದೆ. ತಾವು ಇಂಗ್ಲಿಷ್ನಲ್ಲಿ ಉತ್ತರವನ್ನು ನೀಡುವಂತೆ ಕೋರಿ ಮತ್ತೆ ಪತ್ರವನ್ನು ಬರೆದಿದ್ದರೂ ಸಹ ತಮಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವಿನ ಎಲ್ಲ ಸಂವಹನಗಳನ್ನೂ ಇಂಗ್ಲಿಷ್ನಲ್ಲಿ ನಡೆಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ವಿಚಾರಣೆ ವೇಳೆ ನ್ಯಾಯಾಲಯವು, "ಒಮ್ಮೆ ಮನವಿಯೊಂದನ್ನು ಇಂಗ್ಲಿಷ್ನಲ್ಲಿ ನೀಡಿದ ಮೆಲೆ ಇಂಗ್ಲಿಷ್ನಲ್ಲಿಯೇ ಪ್ರತಿಕ್ರಿಯಿಸಬೇಕಾದದ್ದು ಕೇಂದ್ರ ಸರ್ಕಾರದ ಕರ್ತವ್ಯವಾಗಿದ್ದು, ಇದು ಅದಿಕೃತ ಭಾಷೆಗಳ ಕಾಯಿದೆಯ ಅನುಸರಣೆಯೂ ಅಗಿದೆ," ಎಂದು ಹೇಳಿತು. ಈ ವಿಚಾರವಾಗಿ ನ್ಯಾಯಾಲಯವು ಅಧಿಕೃತ ಭಾಷೆಗಳ ಕಾಯಿದೆ 1963ರ ಸೆಕ್ಷನ್ 3 ಅನ್ನು ಅವಲಂಬಿಸಿತು.
ಇದೇ ವೇಳೆ ನ್ಯಾಯಾಲಯವು, ಜನಾಂಗೀಯತೆ, ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯಮಯ ಅನನ್ಯತೆಗಳನ್ನು ರಕ್ಷಿಸಬೇಕು, ಇದರ ಹೊರತಾಗಿ ಅವುಗಳನ್ನು ನಾಶಪಡಿಸಲು ಅಥವಾ ಕದಡಲು ಮುಂದಾಗುವ ಕ್ರಮಗಳು ಸೂಕ್ಷ್ಮ ವಿಷಯಗಳಾಗಿ ಮಾರ್ಪಡಬಹುದು ಎಂದೂ ಎಚ್ಚರಿಸಿತು.
"ಯಾವುದೇ ಬಗೆಯ ಅಂಧಾಭಿಮಾನವು ಸಮಾಜಕ್ಕೆ ಒಳ್ಳೆಯದಲ್ಲ. ಯಾವುದೇ ರೂಪದಲ್ಲಿ ದುರಭಿಮಾನವನ್ನು ವ್ಯಕ್ತಪಡಿಸಿದರೆ ಅದನ್ನು ವಿರೋಧಿಸಬೇಕು. ಭಾಷಾ ದುರಭಿಮಾನವು ಹೆಚ್ಚು ಅಪಾಯಕಾರಿಯಾಗಿದ್ದು ಅದು ಒಂದು ಭಾಷೆಯು ಮಾತ್ರವೇ ಹೆಚ್ಚು ಶ್ರೇಷ್ಠವಾದುದು ಎನ್ನುವ ಭಾವನೆಯನ್ನು ಮೂಡಿಸುತ್ತದೆ. ಇತರೆ ಭಾಷೆಗಳನ್ನು ಮಾತನಾಡುವ ಜನರ ಮೇಲೆ ಹೇರಿಕೆಯನ್ನು ಮಾಡಲು ಕಾರಣವಾಗುತ್ತದೆ," ಎಂದು ನ್ಯಾಯಾಲಯವು ಸ್ಪಷ್ಟವಾಗಿ ದಾಖಲಿಸಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments