Publish Date: Sat, 19 May 2018 (11:57 IST)
Updated Date: Sat, 19 May 2018 (12:00 IST)
ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಪಕ್ಷದ ನಾಯಕರ ಕೈಗೇ ಸಿಗದೇ ಓಡಾಡುತ್ತಿದ್ದ ಶಾಸಕರು ಎಲ್ಲಿದ್ದಾರೆ ಎಂಬುದು ಪತ್ತೆಯಾಗಿದೆ.
ಇವರಿಬ್ಬರನ್ನು ಕರೆತರಲು ಕಾಂಗ್ರೆಸ್ ನಾಯಕರು ಹರಸಾಹಸ ಮಾಡಿದ್ದರು. ಕೆಲವೊಂದು ಮೂಲಗಳ ಪ್ರಕಾರ ಶಾಸಕರಾದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಅವರು ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ ಎಂದೆಲ್ಲಾ ಸುದ್ದಿ ಓಡಾಡುತ್ತಿತ್ತು.
ಇದೀಗ ಆರಂಭವಾಗಿರುವ ಕಲಾಪಕ್ಕೂ ಇವರಿಬ್ಬರೂ ಇನ್ನೂ ಹಾಜರಾಗಿಲ್ಲ. ಸದ್ಯಕ್ಕೆ ಇವರಿಬ್ಬರೂ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದ್ದು, ಮಧ್ಯಾಹ್ನದ ಬಳಿಕದ ಕಲಾಪಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ ಇವರು ಯಾರ ಪರ ಮತ ಚಲಾಯಿಸಬಹುದು ಎಂಬ ಕುತೂಹಲ ಕಾದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.