Select Your Language

Notifications

webdunia
webdunia
webdunia
webdunia

ಬೂಸ್ಟರ್ ಡೋಸ್ ಯಾವಗ ಕೊಡ್ತೀರಾ?

ಬೂಸ್ಟರ್ ಡೋಸ್ ಯಾವಗ ಕೊಡ್ತೀರಾ?
ನವದೆಹಲಿ , ಗುರುವಾರ, 23 ಡಿಸೆಂಬರ್ 2021 (07:22 IST)
ನವದೆಹಲಿ : ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ದಿನ ಕಳೆದಂತೆ ಹೆಚ್ಚಾಗುತ್ತಿವೆ. ಈ ಮಧ್ಯೆ, ಬೂಸ್ಟರ್ ಡೋಸ್ ಯಾವತ್ತಿನಿಂದ ಕೊಡ್ತೀರಾ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
 
ಇನ್ನೂ ತುಂಬಾ ಮಂದಿಗೆ ದೇಶದಲ್ಲಿ ಲಸಿಕೆ ಸಿಕ್ಕಿಲ್ಲ. ಕೇವಲ ಶೇಕಡಾ 42 ಮಂದಿಗಷ್ಟೇ ಕಂಪ್ಲೀಟ್ ಡೋಸ್ ನೀಡಲಾಗಿದೆ ಅಷ್ಟೇ ಎಂಬುದನ್ನು ಟ್ವಿಟ್ಟರ್ನಲ್ಲಿ ನೆನಪಿಸಿದ್ದಾರೆ.

ಈ ನಡುವೆ ಕನಿಷ್ಠ ಒಂದು ಡೋಸ್ ಪಡೆಯದ ಸರ್ಕಾರಿ ನೌಕರರಿಗೆ ವೇತನ ನೀಡಲ್ಲ ಎಂದು ಪಂಜಾಬ್ ಸರ್ಕಾರ ಆದೇಶ ನೀಡಿದೆ. ವೇತನಕ್ಕೆ ವ್ಯಾಕ್ಸಿನ್ ಸರ್ಟಿಫಿಕೇಟ್ ತೋರಿಸೋದು ಕಡ್ಡಾಯ ಪಡಿಸಿದೆ.

ವಿದೇಶಗಳತ್ತ ಗಮನಿಸಿದರೆ ಇಸ್ರೇಲ್ನಲ್ಲಿ ಓಮಿಕ್ರಾನ್ಗೆ ಮೊದಲ ಸಾವು ಸಂಭವಿಸಿದೆ. ಹೀಗಾಗಿ ಅಲ್ಲಿ ನಾಲ್ಕನೇ ಡೋಸ್ ವಿತರಣೆಗೆ ಕಸರತ್ತು ಆರಂಭವಾಗಿದೆ.

ಈ ಮಧ್ಯೆ, ಆಸ್ಟ್ರೇಲಿಯಾದಲ್ಲಿ ರಕ್ತ ತೆಳುವಾಗಲು ಬಳಸುವ ಹೆಪರಿನ್ ಎಂಬ ಔಷಧಿಯನ್ನು ಓಮಿಕ್ರಾನ್ ಸೋಂಕಿತರ ಮೇಲೆ ಪ್ರಯೋಗಿಸಲಾಗಿದ್ದು, ಇದು ಯಶಸ್ವಿಯಾಗಿದೆ. ಮೂಗಿನ ಮೂಲಕ ಸೋಂಕಿತನಿಗೆ ಔಷಧಿ ನೀಡಿದ ಬಳಿಕ ವೈರಸ್ ವ್ಯಾಪಿಸಿದ ಕುರುಹು ಕಂಡುಬಂದಿಲ್ಲ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

200ರ ಗಡಿದಾಟಿದ ಓಮಿಕ್ರಾನ್!