ರಾತ್ರಿ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಏನಾಯ್ತು?

Webdunia
ಬುಧವಾರ, 7 ಸೆಪ್ಟಂಬರ್ 2022 (10:24 IST)
ಬೆಂಗಳೂರು : ಹೃದಯ ಸ್ತಂಭನದಿಂದ ಆಸ್ಪತ್ರೆ ಸೇರಿದ್ದ ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಕೊನೆಯುಸಿರೆಳೆದಿದ್ದಾರೆ.

ಮಂಗಳವಾರ ಸ್ವಕ್ಷೇತ್ರ ಹುಕ್ಕೇರಿಯಿಂದ ಕತ್ತಿ ವಾಪಸಾಗಿದ್ದರು. ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದ ಉಮೇಶ್ ಕತ್ತಿ ಅವರು ರಾತ್ರಿ ಊಟ ಮುಗಿಸಿ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು.

ಹತ್ತು ನಿಮಿಷವಾದರೂ ಹೊರಗೆ ಬರದಿದ್ದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಇದರಿಂದಾಗಿ ಬಾಗಿಲು ಬಡಿದಿದ್ದಾರೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆಯೂ ಬಾರದ ಹಿನ್ನೆಲೆಯಲ್ಲಿ ಸಹಾಯಕರು ಶೌಚಾಲಯದ ಬಾಗಿಲನ್ನು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಉಮೇಶ್ ಕತ್ತಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂತು.

ಕೂಡಲೇ ಅವರನ್ನು ಕಾರಿನಲ್ಲಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಸುಮಾರು 11ರ ವೇಳೆಗೆ ಮೃತಪಟ್ಟಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಹಿಂದಿನ ಶಂಕಿತೆ ದೇಶದಿಂದ ಪಲಾಯನಕ್ಕೆ ಸ್ಕೆಚು, ಬಯಲಾಗಿದ್ದು ಹೇಗೇ ಗೊತ್ತಾ

ರಾಣಿ ಚನ್ನಮ್ಮ ಮೃಗಾಲಯದಲ್ಲಿ ಇದೆಂಥಾ ಘಟನೆ, ಕೃಷ್ಣಮೃಗಗಳಿಗೆ ಆಗಿದ್ದಾದರೂ ಏನು

ಮತಗಳ್ಳತನ ಚುನಾವಣೆ ತಂತ್ರ, ರಾಹುಲ್ ಗಾಂಧಿ ವಿದೇಶದಲ್ಲಿ ಕಾಫಿ ಕುಡಿಯುತ್ತಿದ್ದರು: ಯದುವೀರ್ ಒಡೆಯರ್

ಜಮ್ಮು ಕಾಶ್ಮೀರದ ನೌಗಮ್ ಠಾಣೆಯಲ್ಲಿ ಸ್ಫೋಟ, ಆಗಿದ್ದೇನು ಗೊತ್ತಾ

ಬಿಜೆಪಿ ಗೆದ್ದರೆ ಮತಗಳ್ಳತನ, ಕಾಂಗ್ರೆಸ್ ಗೆದ್ದರೆ ಎಲ್ಲಾ ಚೆನ್ನಾಗಿರುತ್ತಾ: ಶೋಭಾ ಕರಂದ್ಲಾಜೆ

ಮುಂದಿನ ಸುದ್ದಿ
Show comments