ಗೋಬರ್-ಧನ್ ಸ್ಥಾವರವನ್ನು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ದಿನಕ್ಕೆ 550 ಮೆಟ್ರಿಕ್ ಟನ್ ಘನ ತ್ಯಾಜ್ಯ ಸಂಸ್ಕರಿಸುವ ಸಾಮಥ್ರ್ಯ ಹೊಂದಿದೆ.
ಸ್ಥಾವರ ಪ್ರತಿದಿನ 17,500 ಕೆಜಿ ಜೈವಿಕ ಅನಿಲ ಹಾಗೂ 100 ಟನ್ ಉತ್ತಮ ಗುಣಮಟ್ಟದ ಮಿಶ್ರಗೊಬ್ಬರವನ್ನು ಉತ್ಪಾದಿಸುತ್ತದೆ.
ವಾರ್ಷಿಕವಾಗಿ 1,30,000 ಟನ್ ಇಂಗಾಲದ ಡೈಆಕ್ಸೈಡ್ ಅನ್ನು ತಗ್ಗಿಸುವ ಮೂಲಕ ಜನನಿಬಿಡ ನಗರಗಳ ಗಾಳಿಯ ಗುಣಮಟ್ಟವನ್ನು ಶುದ್ಧೀಕರಿಸಲು ತಂತ್ರಜ್ಞಾನ ಸಹಾಯ ಮಾಡುತ್ತದೆ.
ಶೇ.100 ರಷ್ಟು ಹಸಿ ತ್ಯಾಜ್ಯದ ಮೂಲಕ ಜೈವಿಕ ಅನಿಲವನ್ನು ಉತ್ಪಾದಿಸುತ್ತದೆ. ಶುದ್ಧ ಮೀಥೇನ್ ಅನಿಲದೊಂದಿಗೆ ಶೇ.96 ರಷ್ಟು ಸಿಎನ್ಜಿ ಉತ್ಪಾದಿಸುತ್ತದೆ.
ಸ್ಥಾವರವನ್ನು ಸ್ಥಾಪಿಸಿದ 15 ಎಕರೆ ಮೈದಾನವು ಡಂಪಿಂಗ್ ವಲಯವಾಗಿತ್ತು. ಸ್ಥಾವರವನ್ನು ಪಿಪಿಪಿ ಮಾದರಿಯಲ್ಲಿ ತಯಾರಿಸಲಾಗಿದ್ದು, ಸ್ಥಾವರವನ್ನು ತಯಾರಿಸಿದ ಕಂಪನಿ ಇಂದೋರ್ ಮುನ್ಸಿಪಲ್ ಕಾಪೆರ್Çರೇಶನ್ಗೆ ಪ್ರತಿ ವರ್ಷಕ್ಕೆ 2.5 ಕೋಟಿ ರೂ.ಯನ್ನು 20 ವರ್ಷಗಳವರೆಗೆ ನೀಡಲಿದೆ.