Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಆಮ್ಲಜನಕದ ಸ್ಥಾವರಗಳನ್ನು ಸ್ಥಾಪಿಸುವ ಘೋಷಣೆ ಮಾಡಿದ ನಟ ಸೋನು ಸೂದ್

webdunia
ಭಾನುವಾರ, 23 ಮೇ 2021 (09:33 IST)
ಮುಂಬೈ : ಕೊರೊನಾ ಮೊದಲ ಅಲೆಯ ವೇಳೆ ಹಲವರಿಗೆ ಸಹಾಯ ಮಾಡಿದ ಬಾಲಿವುಡ್ ನಟ ಸೋನು ಸೂದ್ ಅವರು ಕೊರೊನಾ ವೈರಸ್ 2ನೇ ಅಲೆಯ ಮಧ್ಯೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಅವರು ಆಮ್ಲಜನಕದ ಸ್ಥಾವರಗಳನ್ನು ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.

ಇತ್ತೀಚಿನ ವರದಿ ಪ್ರಕಾರ ಸೋನು ಸೂದ್ ಅವರು ಈ ಸ್ಥಾವರಗಳನ್ನು ಈಗ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಅವರ ತಂಡ ಇದೀಗ  ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ  ಮತ್ತು ಆತ್ಮಕೂರದ  ನೆಲ್ಲೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಸ್ಥಾವರವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ. ಎರಡು ಸ್ಥಾವರಗಳು ಜೂನ್ ತಿಂಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಈ ನಟ ಈಗಾಗಲೇ ಪುರಸಭೆ ಆಯುಕ್ತ, ಮತ್ತು ಇತರ ಸಂಬಂಧಿತ ಅಧಿಕಾರಿಗಳಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ನಟ ಪೊನ್ನಂಬಲಂಗೆ ಸಹಾಯ ಹಸ್ತ ನೀಡಿದ ನಟ ಚಿರಂಜೀವಿ