Select Your Language

Notifications

webdunia
webdunia
webdunia
webdunia

ರಾಜ್ಯೋತ್ಸವ ಪ್ರಶಸ್ತಿಯ ವಿಶೇಷತೆಗಳೇನು? ತಿಳಿಯಿರಿ

ರಾಜ್ಯೋತ್ಸವ ಪ್ರಶಸ್ತಿಯ ವಿಶೇಷತೆಗಳೇನು? ತಿಳಿಯಿರಿ
ಬೆಂಗಳೂರು , ಸೋಮವಾರ, 1 ನವೆಂಬರ್ 2021 (08:02 IST)
ಬೆಂಗಳೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. 66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ 66 ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
10 ಸಂಘ ಸಂಸ್ಥೆಗೆ ಅಮೃತ ಮಹೋತ್ಸವದ ರಾಜ್ಯ ಪ್ರಶಸ್ತಿ ಘೋಷಿಸಲಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ 6 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಚಾಮರಾಜನಗರ ಜಿಲ್ಲೆಯ ಮಹದೇವ ಶಂಕನಪುರ
ಚಿತ್ರದುರ್ಗದ ಪ್ರೊ.ಡಿ.ಟಿ.ರಂಗಸ್ವಾಮಿ
ರಾಯಚೂರಿನ ಜಯಲಕ್ಷ್ಮೀ ಮಂಗಳಮೂರ್ತಿ
ಚಿಕ್ಕಮಗಳೂರಿನ ಅಜ್ಜಂಪುರ ಮಂಜುನಾಥ್
ವಿಜಯಪುರದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ
ಬಾಗಲಕೋಟೆಯ ಸಿದ್ದಪ್ಪ ಬಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ರಂಗಭೂಮಿ ಕ್ಷೇತ್ರದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ
ಹಾವೇರಿಯ ಫಕೀರವ್ವ ರಾಮಪ್ಪ ಕೊಡಾಯಿ
ಚಿಕ್ಕಮಗಳೂರಿನ ಪ್ರಕಾಶ್ ಬೆಳವಾಡಿ
ಬಳ್ಳಾರಿಯ ರಮೇಶ್ ಗೌಡ ಪಾಟೀಲ್
ರಾಮನಗರದ ಎನ್.ಮಲ್ಲೇಶಯ್ಯ
ಗದಗ ಜಿಲ್ಲೆಯ ಸಾವಿತ್ರಿ ಗೌಡರ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಜಾನಪದ ಕ್ಷೇತ್ರದಲ್ಲಿ 7 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ವಿಜಯಪುರ ಜಿಲ್ಲೆಯ ಆರ್.ಬಿ.ನಾಯಕ
ಶಿವಮೊಗ್ಗ ಜಿಲ್ಲೆಯ ಗೌರಮ್ಮ ಹುಚ್ಚಪ್ಪ ಮಾಸ್ತರ್
ಬಳ್ಳಾರಿ ಜಿಲ್ಲೆಯ ದುರ್ಗಪ್ಪ ಚೆನ್ನದಾಸರ
ಉಡುಪಿಯ ಬನ್ನಂಜೆ ಬಾಬು ಅಮೀನ್
ಬಾಗಲಕೋಟೆಯ ಮಲ್ಲಿಕಾರ್ಜುನ ರಾಚಪ್ಪ ಮುದಕವಿ
ಧಾರವಾಡದ ವೆಂಕಪ್ಪ ಗೋವಿಂದಪ್ಪ ಭಜಂತ್ರಿ
ಹಾವೇರಿ ಜಿಲ್ಲೆಯ ಮಹಾರುದ್ರಪ್ಪ ವೀರಪ್ಪ ಇಟಗಿಗೆ ಪ್ರಶಸ್ತಿ ಘೋಷಣೆ ಆಗಿದೆ.
ಸಂಗೀತ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಕೋಲಾರ ಜಿಲ್ಲೆಯ ಸಿ.ತ್ಯಾಗರಾಜು (ನಾದಸ್ವರ) ಹಾಗೂ
ದಕ್ಷಿಣ ಕನ್ನಡ ಜಿಲ್ಲೆಯ ಹೆರಾಲ್ಡ್ ಸಿರಿಲ್ ಡಿಸೋಜಾಗೆ ಪ್ರಶಸ್ತಿ ಘೋಷಿಸಲಾಗಿದೆ.
ಶಿಲ್ಪಕಲಾ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ
ಚಿಕ್ಕಬಳ್ಳಾಪುರ ಜಿಲ್ಲೆಯ ಡಾ.ಜಿ.ಜ್ಞಾನಾನಂದ ಹಾಗೂ
ಕೊಪ್ಪಳ ಜಿಲ್ಲೆಯ ವೆಂಕಣ್ಣ ಚಿತ್ರಗಾರಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿದೆ.
ಸಂಕೀರ್ಣ ಕ್ಷೇತ್ರದಲ್ಲಿ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ
ವಿಜಯನಗರ ಜಿಲ್ಲೆಯ ಡಾ.ಬಿ.ಅಂಬಣ್ಣ
ಬಳ್ಳಾರಿ ಜಿಲ್ಲೆಯ ಕ್ಯಾ.ರಾಜಾರಾವ್
ಕೊಪ್ಪಳ ಜಿಲ್ಲೆ ಗಂಗಾವತಿ ಪ್ರಾಣೇಶ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ
ಬೆಂಗಳೂರಿನ ಡಾ.ಹೆಚ್.ಎಸ್.ಸಾವಿತ್ರಿ
ಬೆಂಗಳೂರಿನ ಪ್ರೊ.ಜಿ.ಯು.ಕುಲಕರ್ಣಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಸಮಾಜಸೇವೆ ಕ್ಷೇತ್ರದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ
ಬಾಗಲಕೋಟೆಯ ಸೂಲಗಿತ್ತಿ ಯಮುನವ್ವ(ಸಾಲಮಂಟಪಿ)
ಮೈಸೂರು ಜಿಲ್ಲೆಯ ಮದಲಿ ಮಾದಯ್ಯ
ಬೆಂಗಳೂರಿನ ಮುನಿಯಪ್ಪ ದೊಮ್ಮಲೂರು
ಬೆಳಗಾವಿ ಜಿಲ್ಲೆಯ ಬಿ.ಎಲ್.ಪಾಟೀಲ್ ಅಥಣಿ
ಮಂಡ್ಯ ಜಿಲ್ಲೆಯ ಡಾ.ಜೆ.ಎನ್.ರಾಮಕೃಷ್ಣೇಗೌಡಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ 6 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ದಾವಣಗೆರೆ ಜಿಲ್ಲೆಯ ಡಾ.ಸುಲ್ತಾನ್ ಬಿ. ಜಗಳೂರು
ಧಾರವಾಡ ಜಿಲ್ಲೆಯ ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ)
ಬೆಂಗಳೂರಿನ ಡಾ.ಎ.ಆರ್.ಪ್ರದೀಪ್ (ದಂತ ವೈದ್ಯಕೀಯ)
ದಕ್ಷಿಣ ಕನ್ನಡ ಜಿಲ್ಲೆಯ ಡಾ.ಸುರೇಶ್ ರಾವ್
ಧಾರವಾಡದ ಡಾ.ಶಿವನಗೌಡ ರಾಮನಗೌಡರ್
ಬೆಂಗಳೂರಿನ ಡಾ.ಸುದರ್ಶನ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಕೊಡಗು ಜಿಲ್ಲೆಯ ರೋಹನ್ ಭೋಪಣ್ಣ
ಬೆಂಗಳೂರಿನ ಕೆ.ಗೋಪಿನಾಥ್ (ವಿಶೇಷ ಚೇತನ)
ಉಡುಪಿ ಜಿಲ್ಲೆಯ ರೋಹಿತ್ ಕುಮಾರ್ ಕಟೀಲು
ಬೆಂಗಳೂರಿನ ಎ.ನಾಗರಾಜು (ಕಬಡ್ಡಿ) ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಮೈಸೂರಿನ ಸ್ವಾಮಿ ಲಿಂಗಪ್ಪ
ಶಿವಮೊಗ್ಗ ಜಿಲ್ಲೆಯ ಪ್ರೊ.ಪಿ.ವಿ.ಕೃಷ್ಣಭಟ್
ಧಾರವಾಡದ ಶ್ರೀಧರ್ ಚಕ್ರವರ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಸಂಕೀರ್ಣ ಕ್ಷೇತ್ರದಲ್ಲಿ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ
ವಿಜಯನಗರ ಜಿಲ್ಲೆಯ ಡಾ.ಬಿ. ಅಂಬಣ್ಣ
ಬಳ್ಳಾರಿ ಜಿಲ್ಲೆಯ ಕ್ಯಾ. ರಾಜಾರಾವ್
ಕೊಪ್ಪಳ ಜಿಲ್ಲೆಯ ಗಂಗಾವತಿ ಪ್ರಾಣೇಶ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ
ಬೆಂಗಳೂರಿನ ಡಾ.ಹೆಚ್.ಎಸ್.ಸಾವಿತ್ರಿ
ಬೆಂಗಳೂರಿನ ಪ್ರೊ.ಜಿ.ಯು.ಕುಲಕರ್ಣಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಕೃಷಿ ಕ್ಷೇತ್ರದಲ್ಲಿ ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾ.ಸಿ.ನಾಗರಾಜ್
ಬೀದರ್ ಜಿಲ್ಲೆಯ ಗುರುಲಿಂಗಪ್ಪ ಮೇಲ್ದೊಡ್ಡಿ
ತುಮಕೂರು ಜಿಲ್ಲೆಯ ಶಂಕರಪ್ಪ ಅಮ್ಮನಘಟ್ಟಗೆ ಪ್ರಶಸ್ತಿ ಘೋಷಣೆಯಾಗಿದೆ.
ಪರಿಸರ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಉತ್ತರ ಕನ್ನಡ ಜಿಲ್ಲೆಯ ಮಹಾದೇವ ವೇಳಿಪ
ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ರಾಮಚಂದ್ರಗೆ ಪ್ರಶಸ್ತಿ ಘೋಷಣೆಯಾಗಿದೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ
ಮೈಸೂರಿನ ಪಟ್ನಂ ಅನಂತಪದ್ಮನಾಭ
ಉಡುಪಿ ಜಿಲ್ಲೆಯ ಯು.ಬಿ. ರಾಜಲಕ್ಷ್ಮೀಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಯೋಗ ಕ್ಷೇತ್ರದಲ್ಲಿ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ
ಶಿವಮೊಗ್ಗ ಜಿಲ್ಲೆಯ ಭ.ಮ. ಶ್ರೀಕಂಠ
ಬೆಂಗಳೂರಿನ ಡಾ.ರಾಘವೇಂದ್ರ ಶೆಣೈಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
10 ಸಂಘ ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ-2021
ಗದಗ ಜಿಲ್ಲೆಯ ವೀರೇಶ್ವರ ಪುಣ್ಯಾಶ್ಯಮ ಅಂಧ ಮಕ್ಕಳ ಶಾಲೆ
ದಾವಣಗೆರೆ ಜಿಲ್ಲೆ ಕರ್ನಾಟಕ ಹಿಮೋ ಫೀಲಿಯಾ ಸೊಸೈಟಿ
ಕಲಬುರಗಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಾಮಕೃಷ್ಣಾಶ್ರಮ
ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯುತ್ ಫೆಡರೇಷನ್
ಹಾವೇರಿಯ ಉತ್ಸವ ರಾಕ್ ಗಾರ್ಡನ್
ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ
ಬೆಂಗಳೂರಿನ ಸ್ಟೆಪ್ ಒನ್ ಸಂಸ್ಥೆ
ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜ
ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಪ್ರಶಸ್ತಿ ಘೋಷಿಸಲಾಗಿದೆ.
ಇಂದು 66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬೆಳಗ್ಗೆ 9ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯೋತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಲಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದ ರಾಜ್ಯೋತ್ಸವ ಆಯೋಜನೆ ಮಾಡಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಾರಿಸು ಕನ್ನಡ ಡಿಂಡಿಮವ...!