Select Your Language

Notifications

webdunia
webdunia
webdunia
webdunia

ನಾಳೆ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Tomorrow is the 66th Kannada Rajyotsava
bangalore , ಭಾನುವಾರ, 31 ಅಕ್ಟೋಬರ್ 2021 (22:02 IST)
ಕನ್ನಡದ ಕಣ್ಮಣಿ, ರಾಜರತ್ನ ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿನಲ್ಲಿ
ನಾಳೆ, ದಿ. ನವೆಂಬರ್‌ 01ರಂದು ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರ ಏರ್ಪಡಿಸಿರುವ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಪೋಲಿಸ್ ಅಧಿಕಾರಿ, ರೈಲ್ವೆ ಪೋಲಿಸ್ ವಿಭಾಗದ ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕ ಶ್ರೀ ಭಾಸ್ಕರ್ ರಾವ್ ಐಪಿಎಸ್ ಅವರು ಕನ್ನಡ ನಾಡ ಧ್ವಜಾರೋಹಣ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಶ್ರೀ ಯು. ಬಿ. ವೆಂಕಟೇಶ್, ನೀರಾವರಿ ನಿಗಮಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್, ಕನ್ನಡ ಸಂಗೀತ ಲೋಕದ ದಿಗ್ಗಜ ಗಾಯಕ ಶ್ರೀ ಶಶಿಧರ್ ಕೋಟೆ, ಎನ್ ಸಿ ಬಿ ಅಧ್ಯಕ್ಷ ಶ್ರೀ ಹೆಚ್ ಸಿ ಕೃಷ್ಣ, ಪತ್ರಕರ್ತ ಶ್ರೀ ಸುಧೀಂದ್ರ ರಾವ್,  ಸಮಾಜ ಸೇವಕರಾದ ಶ್ರೀ ಶಿವಶಂಕರ್, ಶ್ರೀ ಆರ್ ಲಕ್ಷ್ಮೀಕಾಂತ್, ಶ್ರೀ ಎಂ ತಿಮ್ಮಯ್ಯ, ಡಾ. ಮುರಳೀಧರ, ಡಾ. ವಾದಿರಾಜ ತಾಯಲುರು, ಶ್ರೀ ನಳಿನಿ ಶಿವಶಂಕರ್, ಶ್ರೀ ಕಲ್ಗುಂಡಿ ನವೀನ್, ಕನ್ನಡ ಸೇವಕರಾದ ಡಾ. ಕೃವೆಂ ರಾಮಚಂದ್ರ, ಕೃವೆಂ ಅಶ್ವಥನಾರಾಯಣ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ಮೊದಲ ವಾರದಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ